ನಾಪತ್ತೆಯಾಗಿದ್ದ ಶಾಸಕ ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆ.

Promotion

ದಾವಣಗೆರೆ,ನವೆಂಬರ್,3,2022(www.justkannada.in):  ಅಕ್ಟೋಬರ್ 30 ರಂದು ಕಾರು ಸಮೇತ ನಾಪತ್ತೆಯಾಗಿದ್ದ  ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್  ಇದೀಗ ಶವವಾಗಿ ಪತ್ತೆಯಾಗಿದ್ದಾರೆ.

ದಾವಣಗೆರೆ  ಜಿಲ್ಲೆ ಹೊನ್ನಾಳಿ ತಾಲ್ಲೂಕು  ಕಡದಕಟ್ಟೆ ಬಳಿ ಕಾಲುವೆಯಲ್ಲಿ ಚಂದ್ರಶೇಖರ್ ಅವರ ಕಾರು ಪತ್ತೆಯಾಗಿದ್ದು ಕ್ರೇನ್ ಮೂಲಕ ಕಾರನ್ನ ಮೇಲೆಕ್ಕೆ ಎತ್ತಲಾಗಿತ್ತು. ಇದೀಗ ಕಾರಿನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ.

KA 17 MA  2534 ನಂಬರ್ ನ ಕಾರು ಕಾಲುವೆಯಲ್ಲಿ ಪತ್ತೆಯಾಗಿದ್ದು ಕಾರು ಚಂದ್ರಶೇಖರ್ ಅವರದ್ದಾಗಿದೆ.  ಶಿವಮೊಗ್ಗಕ್ಕೆ ತೆರಳಿದ್ದ ಚಂದ್ರಶೇಖರ್ ವಾಪಸ್ ದಾವಣಗೆರೆಗೆ ಬರುವಾಗ ನಾಪತ್ತೆಯಾಗಿದ್ದರು. ಚಂದ್ರಶೇಖರ್ ಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು.

Key words: MLA Renukacharya- brother- Son-found- dead.