ದಿಶಾ ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್: ಸಿಇಒಗೆ ತರಾಟೆ.

ಮಂಡ್ಯ,ಆಗಸ್ಟ್,18,2021(www.justkannada.in): ಮಂಡ್ಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ದಿಶಾ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಗೆ  ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ನೀಡಿದ್ದಾರೆ.

ಮಂಢ್ಯ ಸಂಸದೆ ಸುಮಲತಾ ಅಂಬರೀಶ್‌  ಅಧ್ಯಕ್ಷತೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ದಿಶಾ ಸಭೆ ನಡೆಯಿತು. ಸಭೆ ಆರಂಭದಲ್ಲೇ ಸಂಸದೆ ಸುಮಲತಾಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾಂಗ್ ಕೊಟ್ಟಿದ್ದಾರೆ. ಸಭೆಯಲ್ಲಿ ಅನಧಿಕೃತವಾಗಿ ಭಾಗಿಯಾದವರನ್ನ ಹೊರಗೆ ಕಳುಹಿಸಿ ಎಂದು ತಾಕೀತು  ಮಾಡಿದರು.

ಪರೋಕ್ಷವಾಗಿ ಸುಮಲತಾ ಬೆಂಬಲಿಗರನ್ನ ಹೊರಗೆ ಕಳುಹಿಸಿ ಎಂದ ರವೀಂದ್ರ ಶ್ರೀಕಂಠಯ್ಯ ವೇದಿಕೆಯ ಹಿಂದೆ ಮುಂದೆ ಇರುವವರನ್ನ ಹೊರಗೆ ಕಳುಹಿಸಿ ಎಂದು ಸೂಚಿಸಿದರು. ಈ ವೇಳೆ ಸಿಇಒ ಯಾರು ಅನಧಿಕೃತ ವ್ಯಕ್ತಿಗಳು ಇಲ್ಲ ಎಂದು ಉತ್ತರಿಸಿದರು.

ಇದಕ್ಕೆ ಗರಂ ಆದ ಶಾಸಕ ರವೀಂದ್ರ ಶ್ರೀಕಂಠಯ್ಯ, ಎಂಪಿ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಪತ್ರ ವ್ಯವಹಾರ ಮಾಡಿದ್ದಾರೆ. ಅವರು ಅಧಿಕೃತವಾ, ಅನಧಿಕೃತವಾ, ಯಾರು ಅವರು? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರವಾಗಿ ಎಂಪಿ ಆಪ್ತ ಕಾರ್ಯದರ್ಶಿ ಎನ್ನುತ್ತಿದ್ದಾರೆ ಎಂದು ಸಿಇಓ ತಿಳಿಸಿದರು. ನಿಮ್ಮ ದಾಖಲೆಗಳಿದ್ದರೆ ಕೊಡಿ ಅಧಿಕೃತವೋ, ಅನಧಿಕೃತವೋ ಹೇಳಿ ನೋಡೋಣ. ಸಂಸದ ಲೆಟರ್ ಹೆಡ್‌ಗಳು ದುರುಪಯೋಗ ಆಗುತ್ತಿದೆ ಎಂದು ರವೀಂದ್ರ ಗರಂ ಆದರು.

ಅದಕ್ಕೆ ದಿಶಾ ಸಭೆಯಲ್ಲಿ ಚರ್ಚಿಸಲು ತುಂಬಾ ವಿಚಾರಗಳಿವೆ, ಅದನ್ನ ಚರ್ಚಿಸೋಣ ಎಂದು ಸುಮಲತಾ ತಿರುಗೇಟು ನೀಡಲು ಮುಂದಾದರು. ಆದರೂ ಟ್ಟು ಬಿಡದ ರವೀಂದ್ರ ಮೊದಲು ಅವರು ಯಾರು ಅನ್ನೋದನ್ನ ಕನ್ಫರ್ಮ್ ಮಾಡಿ ಎಂದು ಪಟ್ಟು ಹಿಡಿದರು. ಇಲ್ಲಿ ಕೆಆರ್​​ಎಸ್​ ವಿಚಾರ ಚರ್ಚೆಯಾಗಲಿದೆ. ಅದು ಕಾನ್ಫಿಡೆನ್ಸಿಯಲ್ ವಿಚಾರ. ಕೆಲವು ಅನಧಿಕೃತ ವ್ಯಕ್ತಿಗಳು ಇಲ್ಲಿದ್ದಾರೆ. ಅವರನ್ನ ಹೊರಗೆ ಕಳುಹಿಸಿ ಎಂದು ರವೀಂದ್ರ ಶ್ರೀಕಂಠಯ್ಯ ಪಟ್ಟು ಹಿಡಿದರು.

ಇದೇ ವೇಳೆ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ಕಿಡಿಕಾರಿದ ಶಾಸಕ ರವೀಂದ್ರ ಶ್ರೀಕಂಠಯ್ಯ, ನೀವು ಅಕ್ರಮದ ಬಗ್ಗೆ ಮಾತನಾಡುತ್ತೀರಿ. ನಿಮ್ಮ ಸುತ್ತಮುತ್ತ ಅಕ್ರಮ ವ್ಯಕ್ತಿಗಳಿದ್ದಾರೆ.  ಮಂಡ್ಯ ಮತ್ತು ಮಂಡ್ಯ ಜನರ ಮರ್ಯಾದೆ ತೆಗೆಯುತ್ತೀರಿ. ಸಂಸದರ ಹೆಸರು, ಲೆಟರ್ ಹೆಡ್ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಹಾಗೆಯೇ ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸಿಇಒಗೆ ಕ್ಲಾಸ್ ತೆಗೆದುಕೊಂಡರು.

ENGLISH SUMMARY….

MLA Ravindra Srikantaiah counters Mandya MP Sumalatha Ambareesh at DISH meeting
Mandya, August 18, 2021 (www.justkannada.in): The DISHA meeting was held at the Zilla Panchayat auditorium in Mandya today, where MLA Ravindra Srikantaiah gave a counter to Mandya MP Sumalatha Ambareesh.
The DISHA meeting was held under the leadership of MP Sumalatha Ambareesh today. As the meeting commenced MLA Ravindra Srikanataiah asked all those who had attended the meeting without an invitation to send out. Thus he indirectly asked the supporters of MP Sumalatha Ambareesh to go out. The ZP CEO replied there was nobody in the meeting who are not concerned.
Both the MLA and MP were seen pulling the legs of each other throughout the meeting.
Keywords: DISHA meeting/ Mandya/ MP Sumalatha Ambareesh/ MLA Ravindra Srikantaiah/ counter

Key words: MLA -Ravindra Srikantiah- Tong-MP- Sumalatha Ambarish