ನಾನು ಬೆಂಗಳೂರಿಗೂ ಹೋಗಿಲ್ಲ, ದೆಹಲಿಗೂ ಹೋಗಿಲ್ಲ: ತಂದೆ ಸಮಾನ ಬಿಎಸ್ವೈ ನಡೆ ಅನುಸರಿಸ್ತೇನೆ ಎಂದ ರಾಮದಾಸ್

Promotion

ಮೈಸೂರು, ಜುಲೈ 24, 2021 (www.justkannada.in): ರಾಜ್ಯದಲ್ಲಿ ಸಿಎಂ ಬಿಎಸ್ವೈ ಬದಲಾವಣೆ ವಿಚಾರ‍ಕ್ಕೆ ಸಂಬಂಧಿಸಿದಂತೆ ಶಾಸಕ ಎಸ್.ಎ.ರಾಮದಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು ನನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೇಲೆ ಗಮನಹರಿಸುತ್ತಿದ್ದೇನೆ. ನಾನು ಬೆಂಗಳೂರಿಗೂ ಹೋಗಿಲ್ಲ, ದೆಹಲಿಗೂ ಹೋಗಿಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಹರಿಯುವ ನೀರು. ಯಾರು ಹೋಗ್ತಾರೆ ಯಾರು ಬರ್ತಾರೆ ಅನ್ನೊ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಿಎಂ ಬಿಎಸ್ವೈ ನನ್ನ ತಂದೆಯ ಸಮಾನ. ನಿರಂತರ ವಾಗಿ ನನ್ನನ್ನು ಯುವಮೋರ್ಚಾ ಅಧ್ಯಕ್ಷನ್ನಾಗಿಸಿ ನನ್ನನ್ನು ಬೆಳೆಸಿದವರು. ಬಿಎಸ್ವೈ ರೈಲ್ವೆ ಇಂಜಿನ್, ನಾವು ಬೋಗಿಗಳ ರೀತಿ ಅವರನ್ನ ಅನುಸರಿಸುತ್ತೇವೆ ಎಂದಿದ್ದಾರೆ.

ಯಡಿಯೂರಪ್ಪ ಹೈಕಮಾಂಡ್ ತೀರ್ಮಾನಕ್ಕೆ ಬದ್ದವಾದ್ರೆ, ನಾನು ಯಡಿಯೂರಪ್ಪ ನಿರ್ಧಾರಕ್ಕೆ ಬದ್ಧ. ರಾಜಕಾರಣ ನಡೆಯುತ್ತಾ ಹೋಗುತ್ತೆ. ಅದಕ್ಕೆ ನಾನಾಗಲಿ ಮಠಾಧೀಶರಾಗಲಿ ಬೆಂಬಲ ಕೊಡುವ ಅವಶ್ಯಕತೆ ಇಲ್ಲ ಎಂದು ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಹೇಳಿದ್ದಾರೆ.