ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡ ಶಾಸಕ ಪುಟ್ಟರಂಗಶೆಟ್ಟಿ.

ಚಾಮರಾಜನಗರ,ಜೂನ್,8,2023(www.justkannada.in): ವಿಧಾನಸಭೆ ಉಪಸಭಾಪತಿಯಾಗಲು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಒಪ್ಪಿದ್ದಾರೆ.

ಈ ಕುರಿತು ಇಂಧು ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ,  ಒಂದು ವರ್ಷದ ನಂತರ ಸಚಿವ ಸ್ಥಾನ ನೀಡುವುದಾಗಿ ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ವಿಧಾನಸಭೆ  ಡೆಪ್ಯೂಟಿ ಸ್ಪೀಕರ್  ಸ್ಥಾನವನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.

ನಾನು ಕಾಂಗ್ರೆಸ್ ಕಟ್ಟಾಳು . ವರಿಷ್ಠರು ಹೇಳಿದಂತೆ ಕೇಳುವೆ.  ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಾದರೂ ಹೇಳಿಕೊಳ್ಳುವ ಆಗಿಲ್ಲ. ವರಿಷ್ಠರು ಹೇಳಿದರೇ ಒಪ್ಪಬೇಕು. ಹೈಕಮಾಂಡ್ ಕೊಟ್ಟಿದ್ದನ್ನ ನಿಭಾಯಿಸುತ್ತೇನೆ ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.

Key words: MLA -Puttarangashetty -accepted – Legislative Assembly- Deputy Speaker-position