ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಹೋಂ ಕ್ವಾರಂಟೈನ್ ಗೆ ವೈದ್ಯರಿಂದ ಸಲಹೆ…

ರಾಮನಗರ,ಏಪ್ರಿಲ್,17,2021(www.justkannada.in): ಮಾಜಿ ಮುಖ್ಯಮಂತ್ರಿ  ಹೆಚ್.ಡಿ. ಕುಮಾರಸ್ವಾಮಿ  ಅವರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ  ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೂ ಹೋಂ-ಕ್ವಾರಂಟೈನ್ ಆಗುವಂತೆ ವೈದ್ಯರು ಸೂಚನೆ ನೀಡಿದ್ದಾರೆ.jk

ವೈದ್ಯರ ಮುಂದಿನ ಸೂಚನೆ ಬರುವವರೆಗೂ  ಹೋಂ ಕ್ವಾರಂಟೈನ್ ನಲ್ಲೇ ಇರುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅನಿತಾ ಕುಮಾರಸ್ವಾಮಿ, ಕೊರೊನಾ ಅತೀ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳ ಕಾಲ ಜೆಪಿ ನಗರದ ಗೃಹಕಛೇರಿ ಬಳಿಯೂ  ಸಾರ್ವಜನಿಕರ ಪ್ರವೇಶ ಬೇಡವೆಂದು ವೈದ್ಯರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಅನ್ಯತಾ ಭಾವಿಸದೆ ಕಾರ್ಯಕರ್ತರು ಮುಖಂಡರುಗಳು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.MLA-Anitha kumaraswamy- Advice - doctor - home quarantine.

ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನ ಅನುಸರಿಸಬೇಕೆಂದು  ಮನವಿ ಮಾಡಿದ್ದಾರೆ.

Key words: MLA-Anitha kumaraswamy- Advice – doctor – home quarantine.