ಶಾಲೆ,ಕಾಲೇಜು ಆರಂಭ ಕುರಿತು ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದು, ಹೀಗೆ…

Promotion

ಬೆಂಗಳೂರು,ಅಕ್ಟೊಂಬರ್,1,2020(www.justkannada.in) : ಮಕ್ಕಳ ಆರೋಗ್ಯ ಕಾಪಾಡುವುದೇ ನಮ್ಮ ಧ್ಯೇಯವಾಗಿದೆ. ಹೀಗಾಗಿ, ತರಾತುರಿಯಲ್ಲಿ ಶಾಲೆ,ಕಾಲೇಜು ಆರಂಭಿಸುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.jk-logo-justkannada-logoಶಾಲೆ,ಕಾಲೇಜುಗಳ ಪ್ರಾರಂಭ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಸಚಿವ ಎಸ್.ಸುರೇಶ್ ಕುಮಾರ್ ಮಾತನಾಡಿ, ಈ ಕುರಿತು ಜನಪ್ರತಿನಿಧಿಗಳು ,ಶಿಕ್ಷಣ ತಜ್ಞರು, ಪೋಷಕರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಸಧ್ಯಕ್ಕೆ ಶಾಲೆ,ಕಾಲೇಜು ಆರಂಭಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಶಾಲೆ,ಕಾಲೇಜು ಆರಂಭ ವಿಷಯವು ಪ್ರತಿಷ್ಠೆಯಾಗಬಾರದುMinister-State-School-College-S.Suresh Kumar said

ರಾಜ್ಯದಲ್ಲಿ ಶಾಲೆ,ಕಾಲೇಜು ಆರಂಭಕ್ಕೆ ಧಾವಂತವಿಲ್ಲ. ಈ ಕುರಿತು ಸರಕಾರವು ಯಾವುದೇ ತೀರ್ಮಾನ ಮಾಡಿಲ್ಲ. ಪ್ರತಿನಿತ್ಯ ಪೋಷಕರೊಂದಿಗೆ ಸಂರ್ಪಕದಲ್ಲಿದ್ದು, ಮಕ್ಕಳ ಯೋಗಕ್ಷೇಮದ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಹೀಗಾಗಿ, ಶಾಲೆ,ಕಾಲೇಜು ಆರಂಭ ವಿಷಯವು ಪ್ರತಿಷ್ಠೆಯ ವಿಷಯವಾಗಬಾರದು ಎಂದು ಹೇಳಿದ್ದಾರೆ.

ಕೇಂದ್ರ ಸರಕಾರವು ಸೆ.21ರಿಂದ ಶಾಲೆ ಆರಂಭಿಸಲು ಅನುಮತಿ ನೀಡಿತ್ತು. ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಶಾಲೆ,ಕಾಲೇಜು ಆರಂಭಕ್ಕೆ ಒಪ್ಪಿಗೆ ನೀಡಲಾಗಿದೆ. ರಾಜ್ಯ ಸರಕಾರ ಅನುಮತಿ ನೀಡಿಲ್ಲ.  ಸಮಯ ನೋಡಿ ಶಾಲೆ ಆರಂಭಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

key words : Minister-State-School-College-S.Suresh Kumar said