ನಮಗೆ ಸಚಿವ ಸ್ಥಾನ ಮುಖ್ಯ ಅಲ್ಲ: ಬೆಂಗಳೂರು ನಗರ ಅಭಿವೃದ್ದಿಗೆ ಶ್ರಮ- ಸಚಿವ ಕೆ.ಜೆ ಜಾರ್ಜ್.

Promotion

ಬೆಂಗಳೂರು,ಮೇ,20,2023(www.justkannada.in): ನಮಗೆ ಸಚಿವ ಸ್ಥಾನ ಮುಖ್ಯ ಅಲ್ಲ, ಬೆಂಗಳೂರು ನಗರ ಅಭಿವೃದ್ದಿಗೆ ಶ್ರಮ ವಹಿಸುತ್ತೇವೆ ಎಂದು  ಸಚಿವ ಕೆ.ಜೆ ಜಾರ್ಜ್  ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಜೆ ಜಾರ್ಜ್, ನಮಗೆ ಸಚಿವ ಸ್ಥಾನ ಮುಖ್ಯ  ಅಲ್ಲ ಒಳ್ಳೆಯ ಕೆಲಸ ಮಾಡಬೇಕು. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಹೊಂದಾಣಿಕೆಯಿಂದ ಕೆಲಸ ಮಾಡುತ್ತಾರೆ ಎಂದರು.

ನನಗೆ ಯಾವದೇ ಖಾತೆ ಕೊಟ್ಟರೂ ನಾನು ನಿಭಾಯಿಸುತ್ತೇನೆ- ಸಚಿವ ರಾಮಲಿಂಗರೆಡ್ಡಿ.

ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಒಳ್ಳೆಯ ಆಡಳಿತ ಕೊಡುತ್ತೇವೆ. ನಾನು ಯಾವುದೇ ಖಾತೆ ಕೊಟ್ಟರೂ ನಿರ್ವಹಿಸುತ್ತೇನೆ. ಬೆಂಗಳೂರಿಗೆ ಒಳ್ಳೆ ಕೊಡುಗೆ ನೀಡುತ್ತೇವೆ ಎಂದರು.

Key words: Ministership – not important – Minister- KJ George