ಪಿಎಸ್ ಐ ಹಗರಣದಲ್ಲಿ ಅನೇಕ ಮಂತ್ರಿಗಳೇ ಭಾಗಿ: ಅವರ ರಕ್ಷಣೆಗೆ ಸಿಎಂ ಮುಂದಾಗಿದ್ಧಾರೆ- ಸಂಸದ ಡಿ.ಕೆ ಸುರೇಶ್ ಆರೋಪ.

ಬೆಂಗಳೂರು,ಮೇ,17,2022(www.justkannada.in): ಪಿಎಸ್ ಐ ನೇಮಕಾತಿ ಹಗರಣದಲ್ಲಿ ಅನೇಕ ಮಂತ್ರಿಗಳೇ ಭಾಗಿಯಾಗಿದ್ದಾರೆ. ಅವರನ್ನ ಸಿಎಂ ಬಸವರಾಜ ಬೊಮ್ಮಾಯಿ ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್  ಸಂಸದ ಡಿ.ಕೆ ಸುರೇಶ್ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಡಿ.ಕೆ ಸುರೇಶ್, ಸರ್ಕಾರ ಹಗರಣ ಮುಚ್ಚಿಹಾಕಲು ಮುಂದಾಗಿದೆ.  ಯುವಕರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಸಚಿವ ಸಂಪುಟದ ಅನೇಕ ಸದಸ್ಯರು ಅಕ್ರಮದಲ್ಲಿ ಪಾಲುದಾರರಾಗಿದ್ದಾರೆ. ಮಂತ್ರಿಗಳ ರಕ್ಷಣೆಗೆ  ಸಿಎಂ ನಿಂತಿದ್ದಾರೆ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.free rice - BPL card -holders - - Center- MP- DK Suresh

ಅಕ್ರಮದ ಬಗ್ಗೆ ನ್ಯಾಯಸಮ್ಮತ ತನಿಖೆ ನಡೆಯಬೇಕು. ನಮ್ಮ ಕಾಲದಲ್ಲಿ ಅಕ್ರಮ ಆಗಿದ್ದರೂ ತನಿಖೆ ನಡೆಯಲಿ ಎಂದು ಡಿ.ಕೆ ಸುರೇಶ್ ತಿಳಿಸಿದರು.

Key words: ministers -involved – PSI –scandal-CM –defense- MP DK Suresh