ತಮ್ಮನ್ನ ಹರಕೆಯ ಕುರಿ ಎಂದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಚಿವ ವಿ.ಸೋಮಣ್ಣ ಟಾಂಗ್

Promotion

ಮೈಸೂರು,ಏಪ್ರಿಲ್,19,2023(www.justkannada.in):  ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸುವ ಮೂಲಕ ಸಚಿವ ವಿ.ಸೋಮಣ್ಣರನ್ನ ಬಿಜೆಪಿ ಹರಕೆಯ ಕುರಿ ಮಾಡಿದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

ಇಂದು ಈ ಕುರಿತು ಮಾತನಾಡಿದ ಸಚಿವ ವಿ.ಸೋಮಣ್ಣ, ಸಿದ್ಧರಾಮಯ್ಯ ನನ್ನನ್ನು ಹರಕೆಯ ಕುರಿ ಎಂದಿದ್ದಾರೆ.  ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ನಾನು ಇಂದು ನಾಮಪತ್ರ ಸಲ್ಲಿಸುತ್ತೇನೆ ನಾಮಪತ್ರ ಸಲ್ಲಿಕೆಗೆ ಸಂಸದ ಪ್ರತಾಪ್ ಸಿಂಹ ಬರಲಿದ್ದಾರೆ. ಬಿಎಸ್ ಯಡಿಯೂರಪ್ಪ ಕೂಡ ಪ್ರಚಾರಕ್ಕೆ ಬರಲಿದ್ದಾರೆ. ರಾಷ್ಟ್ರದ ನಾಯಕರು ಆಗಮಿಸುವ ಸಾಧ್ಯತೆ ಇದೆ.  ಈ ಚುನಾವಣೆ ನಾನು ಸವಾಲಾಗಿ ಸ್ವೀಕರಿಸುವೆ ಎಂದಿದ್ದಾರೆ.

Key words: Minister- V. Somanna -Tong -former CM- Siddaramaiah