ಮೈಸೂರಿನ ಮೃಗಾಲಯಕ್ಕೆ ಭೇಟಿ ನೀಡಿ ಆನೆ ದತ್ತು ಪಡೆದ ಸಚಿವ ಎಸ್.ಟಿ ಸೋಮಶೇಖರ್.

Promotion

ಮೈಸೂರು,ಅಕ್ಟೋಬರ್,6,2021(www.justkannada.in): ಮೈಸೂರಿನ ಮೃಗಾಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್  ಭೇಟಿ ನೀಡಿ ಮೃಗಾಲಯಕ್ಕೆ ಹೊಸದಾಗಿ ಬಂದಿರುವ ಪ್ರಾಣಿಗಳನ್ನ ವೀಕ್ಷಣೆ ಮಾಡಿದರು.

ಮೈಸೂರು ಮೃಗಾಲಯಕ್ಕೆ ವಿದೇಶದಿಂದ ಬಂದಿರುವ ಗೊರಿಲ್ಲಾ ಮತ್ತು ಒರಂಗೂಟವನ್ನ ಸಚಿವ ಎಸ್.ಟಿ ಸೋಮಶೇಖರ್ ವೀಕ್ಷಣೆ ಮಾಡಿದರು. ಇದೇ ವೇಳೆ ಪ್ರಾಣಿಗಳಿಗೆ ನಿರ್ಮಾಣವಾಗಿರುವ ಗೊರಿಲ್ಲಾ ಮನೆಯನ್ನು ಸಚಿವ ಎಸ್.ಟಿ ಸೋಮಶೇಖರ್ ಪರಿಶೀಲಿಸಿದರು.mysore-corona-2nd wave-minister –ST Somashekar- worship-kote maramma temple

ಜತೆಗೆ ಇಂದು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಅವರ ಹುಟ್ಟುಹಬ್ಬವಾಗಿದ್ದು ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬದ ಅಂಗವಾಗಿ ಆನೆ ದತ್ತು ಪಡೆದುಕೊಂಡರು. ಸಚಿವರಿಗೆ ಶಾಸಕ ಎಲ್.ನಾಗೇಂದ್ರ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಸಾಥ್ ನೀಡಿದರು.

Key words: Minister- ST Somashekhar- visited – Mysore Zoo