• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Saturday, May 10, 2025
Sign in
Welcome! Log into your account
Forgot your password? Get help
Create an account
Privacy Policy
Create an account
Welcome! Register for an account
A password will be e-mailed to you.
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
vtu
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ಪಾಲಿಕೆಯಿಂದ ಖಾತೆ ಕಂದಾಯ ಅದಾಲತ್‌ ಗೆ‌ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
  • Front Page
  • News
  • Politics

ಪಾಲಿಕೆಯಿಂದ ಖಾತೆ ಕಂದಾಯ ಅದಾಲತ್‌ ಗೆ‌ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

By
JK Desk
-
2022-01-04
Facebook
Twitter
Pinterest
WhatsApp

    ಮೈಸೂರು, 4 ಜನವರಿ,2022(www.justkannada.in) ವಿಜಯನಗರ 3ನೇ ಹಂತದ ಖಾತೆ ಕಂದಾಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕಾರ್ಯಕ್ರಮ ಹಾಗೂ ಖಾತೆ ಕಂದಾಯ ಅದಾಲತ್ ಕಾರ್ಯಕ್ರಮಕ್ಕೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮಂಗಳವಾರ ಚಾಲನೆ ನೀಡಿದರು.

    ಸಮಾರಂಭದಲ್ಲಿ  ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ, ವಿಜಯನಗರ 3ನೇ ಹಂತದಲ್ಲಿ ಕೆಲವು ಖಾತೆಗಳು ಮುಡಾದಲ್ಲಿ ಮತ್ತೆ ಕೆಲವು ಖಾತೆಗಳು ಪಾಲಿಕೆ ವ್ಯಾಪ್ತಿಯಲ್ಲಿ ಇದ್ದವು. ಇದರಿಂದ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಕೆಲಸಗಳನ್ನು ಆಗುತ್ತಿರಲಿಲ್ಲ. ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಈ ಸಮಸ್ಯೆಯನ್ನು ಗಮನಿಸಿ, ಶಾಶ್ವತ ಪರಿಹಾರ ನೀಡಿದ್ದಾರೆ ಎಂದು ಹೇಳಿದರು.

    ಉಸ್ತುವಾರಿ ಸಚಿವರ ಪ್ರಯತ್ನದ ಫಲವಾಗಿ ಮೈಸೂರು ನಗರದಲ್ಲಿ ಬೀದಿ ದೀಪಗಳಿಗೆ ಎಲ್.ಇ.ಡಿ. ಬಲ್ಬ್ ಅಳವಡಿಸಲು  109 ಕೋಟಿ ಮಂಜೂರು ಆಗಿದೆ. ಇನ್ನೂ ಅನೇಕ ಕೆಲಸಗಳು ಆಗುತ್ತಿವೆ ಎಂದು ಹೇಳಿದರು.

    ವಿಜಯನಗರ 3ನೇ ಹಂತಕ್ಕೆ ಈಗ ಕಬಿನಿ ನೀರು ಬರುತ್ತಿದೆ. ಉಂಡುವಾಡಿ ಯೋಜನೆ ಕೂಡ ಆಗುತ್ತಿದೆ. ಈ ಯೋಜನೆ ಪೂರ್ಣಗೊಂಡರೆ ಮುಂದಿನ 50 ವರ್ಷಗಳಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ ಎಂದು ಜಿ.ಟಿ.ದೇವೇಗೌಡರು ಹೇಳಿದರು.

    ಮೈಸೂರು ನಗರದ ಮುಡಾ ವ್ಯಾಪ್ತಿಯಲ್ಲಿ ಹೊಸ ಬಡಾವಣೆಗಳಲ್ಲಿ ರಸ್ತೆ, ಒಳಚರಂಡಿ, ಕುಡಿಯುವ ನೀರು ಮುಂತಾದ ಅಭಿವೃದ್ಧಿ ಕೆಲಸಗಳನ್ನು 377 ಕೋಟಿ ರೂ.ವೆಚ್ಚದಲ್ಲಿ ತೆಗೆದುಕೊಳ್ಳಲು ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸರ್ಕಾರದ ಅನುಮೋದನೆ ಕೊಡಿಸಿದರು. ಈಗ ಟೆಂಡರ್ ಆಗಿದೆ. ಫೆಬ್ರವರಿ ವೇಳೆಗೆ ಕಾಮಗಾರಿಗಳು ಆರಂಭವಾಗುತ್ತವೆ ಎಂದು ಮುಡಾ ಅಧ್ಯಕ್ಷರಾದ ಹೆಚ್.ವಿ.ರಾಜೀವ್ ಹೇಳಿದರು.

    ಈ 377 ಕೋಟಿ ರೂ. ಅನುದಾನದಲ್ಲಿ ಮುಡಾದಿಂದ ಒಂದು ಬಾರಿಗೆ ಮಾತ್ರ ಮಾಡುವ ಕೆಲಸಗಳು ಇವೆ. ಕೆಲವು ಕಾಮಗಾರಿಗಳನ್ನು ಈಗಾಗಲೇ ಪಾಲಿಕೆಗೆ ಹಸ್ತಾಂತರಿಸಿರುವ ಬಡಾವಣೆಗಳಲ್ಲಿ ಇವೆ ಎಂದರು.

    ಪಾಲಿಕೆ ವ್ಯಾಪ್ತಿಯ ಬಡಾವಣೆಗೆ ಮುಡಾ ಅನುದಾನ ಏಕೆ ಎಂದು ಸರ್ಕಾರದ ಹಂತದಲ್ಲಿ ಕೇಳಿದರು. ಕೆಲವು ಮೂಲಭೂತ ಸೌಕರ್ಯ ಒದಗಿಸುವ‌ ಮುನ್ನವೇ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಮುಡಾದಿಂದ ಆ ಕೆಲಸಗಳನ್ನು ಮಾಡುವುದು ಅನಿವಾರ್ಯ ಎಂಬುದನ್ನು ಉಸ್ತುವಾರಿ ಸಚಿವರು ಮನವರಿಕೆ ಮಾಡಿ, ಎಲ್ಲಾ ಕಾಮಗಾರಿಗಳನ್ನು ತೆಗೆದುಕೊಳ್ಳಲು ಅನುಮೋದನೆ ಕೊಡಿಸಿದರು ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮೇಯರ್ ಸುನಂದಾ ಪಾಲನೇತ್ರ, ಪಾಲಿಕೆ ಆಯುಕ್ತ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್, ಮುಡಾ ಆಯುಕ್ತ ಡಾ. ಡಿ.ಬಿ.ನಟೇಶ್, ಅಧೀಕ್ಷಕ ಇಂಜಿನಿಯರ್ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

    Key words: minister-ST Somashekhar-Account- Revenue –Adalat-mysore city corporation

    • TAGS
    • Adalat
    • minister-ST Somashekhar-Account
    • mysore-city-corporation
    • Revenue
    Facebook
    Twitter
    Pinterest
    WhatsApp
      Previous articleಪಾದಯಾತ್ರೆಗೆ ಮುಂದಾಗಿರುವ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ ಸಚಿವ ಡಾ.ಕೆ.ಸುಧಾಕರ್.
      Next articleಕೊರೋನಾ ಹೆಚ್ಚಳ ಹಿನ್ನೆಲೆ: ದೆಹಲಿಯಲ್ಲಿ ಮತ್ತೆ ವೀಕೆಂಡ್ ಕರ್ಫ್ಯೂ ಜಾರಿ.
      JK Desk

      RELATED ARTICLESMORE FROM AUTHOR

      ಜಿ.ಟಿ.ಟಿ.ಸಿ ಕೇಂದ್ರದಲ್ಲಿ ವಿವಿಧ ಕೋರ್ಸ್ ಗಳಿಗೆ ಮೇ 15ರೊಳಗೆ ಅರ್ಜಿ ಸಲ್ಲಿಸಿ

      ʼಎʼ ಮತ್ತು ʼಬಿʼ ಅಧಿಕಾರಿಗಳಿಗೆ ಉನ್ನತ ಮಟ್ಟದ ತರಬೇತಿ ನಮ್ಮ ರಾಜ್ಯದ ಹೆಮ್ಮೆಯ ವಿಷಯ- CS ಶಾಲಿನಿ ರಜನೀಶ್

      ಮೇ 26ರಿಂದ SSLC ಪರೀಕ್ಷೆ-2 : ನೋಂದಣಿಗೆ ನಾಳೆಯೇ ಕಡೇ ದಿನ

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      2025-02-13

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      2025-02-11

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      2025-02-11

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      2020-03-30

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      2019-06-16

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      2021-01-05

      POPULAR CATEGORY

      • Front Page42466
      • News42450
      • Politics24740
      • Crime3848
      • Cinema3496
      • Sports1300
      • Tenders415
      • Media Masala360
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout