ಮೈಸೂರಿಗೆ ಇಂದು ಸಚಿವ ಶ್ರೀರಾಮುಲು ಭೇಟಿ: ಅಧಿಕಾರಿಗಳ ಜತೆ ಸಭೆ…

Promotion

ಮೈಸೂರು,ಅಕ್ಟೋಬರ್,7,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು  ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆ ಮೈಸೂರಿಗೆ ಸಚಿವರುಗಳು ದೌಡಾಯಿಸಿ ಅಧಿಕಾರಗಳ ಜತೆ ಸಭೆ ನಡೆಸುತ್ತಿದ್ದಾರೆ. ಇದೀಗ ಇಂದು ಆರೋಗ್ಯ ಸಚಿವ ಶ್ರೀರಾಮುಲು ಮೈಸೂರಿಗೆ ಭೇಟಿ ನೀಡಿ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.jk-logo-justkannada-logo

ಸಚಿವ ಶ್ರೀರಾಮುಲು ಇಂದು ಮೈಸೂರು ಜಿಲ್ಲೆಯಲ್ಲಿ ಒಂದು ದಿನದ  ತಾತ್ಕಾಲಿಕ ಪ್ರವಾಸ ಕೈಗೊಂಡಿದ್ದು, ನಾಡಹಬ್ಬಕ್ಕೆ ಕೆಲ ದಿನಗಳು ಬಾಕಿ ಇರುವ  ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಸಭೆ ನಡೆಯಲಿದ್ದು, ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಹೆಚ್ಚಳ ಹಾಗೂ ಕೊರೋನಾ ಹರಡುವಿಕೆಗೆ ಕಡಿವಾಣ ಹಾಕುವ ಬಗ್ಗೆ  ಸಭೆಯಲ್ಲಿ ಚರ್ಚಿಸಲಿದ್ದಾರೆ.Minister- Sriramulu – Mysore- today-corona- increase-Meeting.

ಇನ್ನು  ಮೊನ್ನೆಯಷ್ಟೇ ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಕೂಡ ಮೈಸೂರಿನಲ್ಲಿ ಸಭೆ ನಡೆಸಿದ್ದರು. ದಸರಾ ಆಚರಣೆ, ಕೊರೊನ ನಿಯಂತ್ರಣ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ  ನಡೆಸಿ ಚರ್ಚಿಸಿದ್ದರು. ಮೈಸೂರಿನಲ್ಲಿ ಇತ್ತೀಚೆಗೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿದ್ದು ಈ ಮಧ್ಯೆ ನಾಡಹಬ್ಬ ದಸರಾ ಕೂಡ ಸಮೀಪಿಸುತ್ತಿದೆ. ಹೀಗಾಗಿ ಹೆಚ್ಚೆಚ್ಚು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸಚಿವರು ಮುಂದಾಗಿದ್ದು ಈ ಹಿನ್ನೆಲೆ ಮೈಸೂರಿನಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದಾರೆ.

Key words; Minister- Sriramulu – Mysore- today-corona- increase-Meeting.