ಬಿಜೆಪಿ ಬರುವಂತೆ ಸಿದ್ಧರಾಮಯ್ಯಗೆ ಆಹ್ವಾನ ನೀಡಿದ ಸಚಿವ ಶ್ರೀರಾಮುಲು.

Promotion

ಬಳ್ಳಾರಿ,ಆಗಸ್ಟ್,18,2022(www.justkannada.in):  ಮಾಜಿ ಸಿಎಂ ಸಿದ‍್ಧರಾಮಯ್ಯ ಬಿಜೆಪಿಗೆ ಬಂದರೇ ಸ್ವಾಗತ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಆಹ್ವಾನ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಶ್ರೀರಾಮುಲು, ಹಿಂದುಳಿದ ಸಮುದಾಯದ ನಾಯಕ. ಸಿದ್ಧರಾಮಯ್ಯ ಬಿಜೆಪಿ ಬಂದರೆ ಸ್ವಾಗತ. ಬಿಜೆಪಿಗೆ ಬಂದರೆ ಶಕ್ತಿ ಹೆಚ್ಚಲಿದೆ. ಹಿಂದುಳಿದ ನಾಯಕರು ಒಗ್ಗಟ್ಟಾಗಬೇಕು. ಬಿಜೆಪಿ ಹಿಂದುಳಿದ ವರ್ಗವನ್ನ ಬಿಟ್ಟುಕೊಟ್ಟಿಲ್ಲ. ನಾನು ಹೊಂದಾಣಿಕೆ ರಾಜಕಾರಣ ಮಾಡಲ್ಲ. ಪಕ್ಷದ ಸಿದ‍್ಧಾಂತದ ಮೇಲೆ ಚುನಾವಣೆ ಎದರಿಸುವೆ ಎಂದರು.

ಕಾಂಗ್ರೆಸ್ ಪಕ್ಷದಿಂದ ಎಲ್ಲ ಹಿರಿಯ ನಾಯಕರು ಬಿಜೆಪಿಗೆ ಬಂದಿದ್ದಾರೆ, ಹೀಗಾಗಿ ಸಿದ್ದರಾಮಯ್ಯ ಬಿಜೆಪಿಗೆ ಬರಲಿ . ಸಿದ್ದರಾಮಯ್ಯರಿಗೆ ಅವರ ಪಕ್ಷದಿಂದ ಇರಿಸುಮುರಿಸು ಉಂಟಾಗುತ್ತಿದೆ. ಸಿದ್ದರಾಮಯ್ಯರಿಗೆ ಡಿಕೆಶಿ ಇರಿಸುಮುರಿಸು ಮಾಡುತ್ತಿದ್ದಾರೆ. ಅವರಲ್ಲೆ ಸಾಕಷ್ಟು ಜಿದ್ದಾಜಿದ್ದಿ ಇದೆ. ಹೀಗಾಗಿ ಅವರನ್ನ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಹಿಂದುಳಿದ ನಾಯಕರು ಎಲ್ಲರೂ ಒಂದಾಗಬೇಕು ಎಂದರು.

Key words: Minister –Sriramulu- invited-Siddaramaiah – join- BJP.