ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸುಳಿವು ಸಚಿವ ಶಿವಶಂಕರರೆಡ್ಡಿ…

Promotion

ಚಿಕ್ಕಬಳ್ಳಾಪುರ,ಜೂ,15,2019(www.justkannada.in): ನಿನ್ನಯಷ್ಟೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿ ಇಬ್ಬರು ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಇದೀಗ ಅಸಮಾಧಾನಿತರನ್ನ ಸಮಾಧಾನ ಪಡಿಸುವ ಸಲುವಾಗಿ ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೃಷಿ ಸಚಿವ ಎನ್.ಎಚ್ ಶಿವಶಂಕರರೆಡ್ಡಿ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಇಂದು ಮಾತನಾಡಿದ ಸಚಿವ ಶಿವಶಂಕರರೆಡ್ಡಿ, ಶೀಘ್ರದಲ್ಲೇ ಮತ್ತೊಂದು ಸುತ್ತಿನ ಸಚಿವ ಸಂಪುಟ ವಿಸ್ತರಣೆಯಾಗಲಿದೆ.  ಆ ವೇಳೆ ಅಸಮಾಧಾನಿತರೆಲ್ಲರಿಗೂ ಅವಕಾಶ ಸಿಗುತ್ತೆ. ನಮಗೆ ಹೈಕಮಾಂಡ್ ಸಮಯ ನಿಗದಿ ಮಾಡಿದೆ.ನಾವು  ನಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲಿ ಕೆಲವರಿಗೆ ತೊಂದರೆಯಾಗಿರುವುದು ನಿಜ.  ನಮ್ಮೆಲ್ಲರ ಒಳತಿಗಾಗಿ ತೊಂದರೆ ಸಹಿಸಿಕೊಳ್ಳಬೇಕಿದೆ. ಶಾಸಕ ಬಿಸಿ ಪಾಟೀಲ್ ಗೆ ಸಚಿವ ಸ್ಥಾನ ಸಿಗಬೇಕಿತ್ತು. ಆಭಾಗದಲ್ಲಿ ಸಚಿವ ಸ್ಥಾನ ಸಿಕ್ಕಿಲ್ಲ. ಹೀಗಾಗಿ ಹತಾಶರಾಗಿ ಬಿ.ಸಿ ಪಾಟೀಲ್ ಮಾತನಾಡುತ್ತಿದ್ದಾರೆ ಎಂದು ಸಚಿವ ಶಿವಶಂಕರ ರೆಡ್ಡಿ ಹೇಳಿದರು.

Key words: Minister Sivashanka Reddy hints at another round of cabinet expansion soon.

#cabinet #expansion #soon #Minister #SivashankaReddy