ತಜ್ಞ ಸಮಿತಿ ವರದಿ, ಮಾರ್ಗದರ್ಶಿಯನ್ವಯ ಆನ್ ಲೈನ್ ಶಿಕ್ಷಣ ನಡೆಸುವಂತೆ ಸುತ್ತೋಲೆ ಹೊರಡಿಸಲು ಸಚಿವ ಸುರೇಶ್ ಕುಮಾರ್ ಸೂಚನೆ…

ಬೆಂಗಳೂರು,ಅಕ್ಟೋಬರ್,21,2020(www.justkannada.in): ಆನ್ ಲೈನ್ ಶಿಕ್ಷಣ ಕುರಿತು ತಜ್ಞ ಸಮಿತಿ ನೀಡಿರುವ ವರದಿಯನ್ವಯ ಮತ್ತು ಸಿದ್ಧಪಡಿಸಲಾದ ಮಾರ್ಗದರ್ಶಿಯನ್ವಯ ಆನ್ ಲೈನ್ ಶಿಕ್ಷಣ ಕೈಗೊಳ್ಳುವಂತೆ ವಿವರವಾದ ಸುತ್ತೋಲೆ ಹೊರಡಿಸಿಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.minister-s-suresh-kumar-instructs-online-education-under-guidance-expert-report

ಆನ್ ಲೈನ್ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳ ಕಣ್ಣಿಗೆ ತೊಂದರೆಯಾಗುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಗಮನಿಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಆನ್ ಲೈನ್ ಶಿಕ್ಷಣವನ್ನು ತಮಗೆ ತೋಚಿದಂತೆ ಮಾಡದೇ, ಆನ್ ಲೈನ್ ಶಿಕ್ಷಣ ಕುರಿತು ತಜ್ಞ ಸಮಿತಿ ನೀಡಿರುವ ವರದಿಯನ್ವಯ ಸಿದ್ಧಪಡಿಸಲಾದ ಮಾರ್ಗದರ್ಶಿಯನ್ವಯ ಆನ್ ಲೈನ್ ಶಿಕ್ಷಣ ಕೈಗೊಳ್ಳುವಂತೆ ವಿವರವಾದ ಸುತ್ತೋಲೆ ಹೊರಡಿಸಿಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.minister-s-suresh-kumar-instructs-online-education-under-guidance-expert-report

ಕೊರೋನಾ ಹಿನ್ನೆಲೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ಜಾರಿ ಮಾಡಲಾಗಿದ್ದು, ಆನ್ ಲೈನ್  ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಆದ್ರೇ ವಿದ್ಯಾರ್ಥಿಗಳು ಆನ್ ಲೈನ್ ತರಗತಿಗೆ ಹಾಜರಾಗುತ್ತಿರುವುದರಿಂದ ಅವರುಗಳು ಕಣ್ಣಿನ ಸಮಸ್ಯೆ ಎದುರಿಸುವಂತಾಗಿದೆ.

Key words: Minister –S.Suresh Kumar- instructs – online education -under -guidance -expert – report.