ಸಚಿವ ಆರ್.ವಿ ದೇಶಪಾಂಡೆ ಅವರ ಬೆಂಗಾವಲು ವಾಹನ ಪಲ್ಟಿ…

Promotion

ಉತ್ತರ ಕನ್ನಡ,ಜೂ,15,2019(www.justkannada.in):  ಕಂದಾಯ ಸಚಿವ ಆರ್.ವಿದೇಶಪಾಂಡೆ ಅವರ ಬೆಂಗಾವಲು ವಾಹನ ಪಲ್ಟಿಯಾಗಿ ವಾಹನದಲ್ಲಿದ್ದ ಇಬ್ಬರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.  ಕಾರವಾರದಲ್ಲಿ ಜಿಲ್ಲಾ ಪಂಚಾಯತ್  ಕೆ ಡಿ ಪಿ ಸಭೆಗೆ ಸಚಿವ ಆರ್ ವಿ ದೇಶಪಾಂಡೆ ಅವರು ಹಳಿಯಾಳದಿಂದ ಕಾರವಾರಕ್ಕೆ ಬೆಂಗಾವಲು ವಾಹನದೊಂದಿಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ‌ ಎನ್ನಲಾಗಿದೆ.

ಇನ್ನು ಬೆಂಗಾವಲು ವಾಹನದಲ್ಲಿದ್ದ ರಾಜೇಶ್ ಮತ್ತು ಮಾರುತಿ ಎಂಬುವವರಿಗೆ ಗಾಯಗಳಾಗಿದ್ದು ಗಾಯಾಳುಗಳನ್ನ ಉತ್ತರ ಕನ್ನಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Key words: Minister RV Deshpande’s -escort vehicles-overturn-karwar