ಈದ್ಗಾ ಮೈದಾನದಲ್ಲಿ ಗೌರಿ ಗಣೇಶ ಹಬ್ಬ ಆಚರಣೆ ಅನುಮತಿ ಬಗ್ಗೆ ಸಿಎಂ ಜೊತೆ ಚರ್ಚಿಸಿ ತೀರ್ಮಾನ- ಸಚಿವ ಆರ್.ಅಶೋಕ್.

ಬೆಂಗಳೂರು,ಆಗಸ್ಟ್,17,2022(www.justkannada.in): ಈದ್ಗಾ ಮೈದಾನದಲ್ಲಿಗೌರಿ ಗಣೇಶ್ ಹಬ್ಬ ಆಚರಣೆಗೆ  ಅನುಮತಿ ನೀಡುವ  ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಆರ್.ಅಶೋಕ್, ಈದ್ಗಾ ಮೈದಾನದಲ್ಲಿ ಗೌರಿ ಗಣೇಶ ಹಬ್ಬ ಆಚರಿಸಲು ಅನುಮತಿ ನೀಡುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಬಂದಿದೆ. ಆದ್ರೆ ಈ ವಿಚಾರದ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ.  ಚಾಮರಾಜ ಪೇಟೆ ಮೈದಾನ ಕಂದಾಯ ಇಲಾಖೆಗೆ ಸೇರಿದೆ. ಅಲ್ಲಿ ಏನಾಗಬೇಕು ಎಂದು ಸರ್ಕಾರ ನಿರ್ಧರಿಸುತ್ತೆ . ಬೇರೆ ಯಾರಿಗೂ ಆ ಬಗ್ಗೆ ನಿರ್ಧರಿಸಲು ಅಧಿಕಾರ ಇಲ್ಲ ಎಂದರು.

ಇನ್ನು ಮುಸ್ಲೀಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕಿತ್ತು ಎಂದು ಪ್ರಶ್ನಿಸಿದ್ಧ ಮಾಜಿ ಸಿಎಂ ಸಿದ‍್ಧರಾಮಯ್ಯಗೆ ತಿರುಗೇಟು ಕೊಟ್ಟ ಸಚಿವ ಆರ್.ಅಶೋಕ್, ಅದು ಮುಸ್ಲೀಂ ಏರಿಯಾ ಅಂದರೇ ಅದು ಪಾಕಿಸ್ತಾನದಲ್ಲಿದೆಯಾ..? ಸಾವರ್ಕರ್ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ವೀರ ಸಾವರ್ಕರ್ ಅವರನ್ನ  ಕಾಂಗ್ರೆಸ್ ನವರು ಒಪ್ಪದೇ ಇರಬಹುದು.  ಆದರೆ ಸಾವರ್ಕರ್  ದೇಶಭಕ್ತ ಎಂದು ಕಾಂಗ್ರೆಸ್ ವಿರುದ್ಧ ಗುಡಗಿದರು.

Key words: Minister -R. Ashok – permission –celebrate- Gouri Ganesha- festival – Idga Maidan.