ಮಠಕ್ಕೆ ಹೋದ್ರೆ ಮಂತ್ರಿಗಿರಿ ಸಿಗುತ್ತೆ ಅನ್ನೊದಾಗಿದ್ರೆ ಎಲ್ಲರೂ ಕ್ಯೂನಲ್ಲಿ ನಿಲ್ಲುತ್ತಿದ್ರು-ಸಚಿವ ಕೆ.ಎಸ್ ಈಶ್ವರಪ್ಪ.

ಶಿವಮೊಗ್ಗ,ಜೂನ್,25,2021(www.justkannada.in):  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ್ದರು. ಈ ಮಧ್ಯೆ ಸಚಿವ ಸ್ಥಾನವನ್ನ ಮತ್ತೆ ಗಿಟ್ಟಿಸಿಕೊಳ್ಳಲು ಲಾಬಿ ನಡೆಸುವ ಸಲುವಾಗಿ ಭೇಟಿ ನೀಡಿದ್ದಾರೆ ಎಂಬ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್ ಈಶ್ವರಪ್ಪ, ಮಠಕ್ಕೆ ಹೋದ್ರೆ ಮಂತ್ರಿಗಿರಿ ಸಿಗುತ್ತೆ ಅನ್ನೊದಾಗಿದ್ರೆ ಎಲ್ಲರೂ ಕ್ಯೂನಲ್ಲಿ ನಿಲ್ಲುತ್ತಿದ್ರು ಎಂದು ವ್ಯಂಗ್ಯವಾಗಿ ಹೇಳಿದರು.jk

ಶಿವಮೊಗ್ಗದಲ್ಲಿ ಇಂದು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಮಠಕ್ಕೆ ಹೋದರೇ ಸಚಿವ ಸ್ಥಾನ ಸಿಗುತ್ತದೆ ಎನ್ನುವಾಗಿದ್ದರೇ ಎಲ್ಲರೂ ಮಠದ ಮುಂದೆ ಕ್ಯೂ ನಿಲ್ಲುತ್ತಾರೆ. ರಮೇಶ್ ಜಾರಕಿಹೊಳಿ ಶ್ರೀಗಳ ಆಶೀರ್ವಾದ ಪಡೆಯಲು ಮಠಕ್ಕೆ ಹೋಗಿರಬಹುದು. ಮಂತ್ರಿ ಸ್ಥಾನ  ಪಡೆಯಲು ಮಠಕ್ಕೆ ಹೋಗಿದ್ದಾರೆ ಎನ್ನಲು ಸಾಧ್ಯವಿಲ್ಲ. ಯಾರು ಬೇಕಾದರೂ ಮಠಕ್ಕೆ ಹೋಗಿ ಆಶೀರ್ವಾದ ಪಡೆಯಬಹುದು ಎಂದರು.

ರಾಜಕೀಯದಲ್ಲಿ ಯಾರೂ ಕೂಡ ಸನ್ಯಾಸಿಯಲ್ಲ. ಮಂತ್ರಿ ಸ್ಥಾನ ಪಡೆಯಲು ರಮೇಶ್ ಜಾರಕಿಹೊಳಿ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.

ಕಮಿಷನ್ ಆರೋಪ: ‘ಕೈ’ಶಾಸಕನಿಗೆ ತಿರುಗೇಟು.

ತಮ್ಮ ವಿರುದ್ಧ ಕಮಿಷನ್ ಆರೋಪ ಮಾಡಿದ ಕಂಪ್ಲಿ ಕಾಂಗ್ರೆಸ್ ಶಾಸಕ ಗಣೇಶ್ ಗೆ ತಿರುಗೇಟು ನೀಡಿದ ಸಚಿವ ಕೆ.ಎಸ್ ಈಶ್ವರಪ್ಪ, ಕಂಪ್ಲಿ ಗಣೇಶ್ ಗೆ ತಲೆ ಸರಿಯಿಲ್ಲ. ರಸ್ತೆ ಅಭಿವೃದ್ಧಿಗಾಗಿ ಶಾಸಕರಿಗೆ ಸಿಎಂ ಅನುದಾನ ನೀಡಿದ್ದರು. ಆದರೆ ನೇರವಾಗಿ ಶಾಸಕರಿಗೆ ಕೊಡಲು ಆಗಲ್ಲ. ಅದ್ಧರಿಂದ ಸಿಎಂ ಆದೇಶ ಹಿಂಪಡೆದಿದ್ದರು. ಈ ಹಣವನ್ನ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನೀಡಿದ್ದಾರೆ. ಈ ಹಿಂದೆ ಗಣೇಶ್ ಗೆ ಕೆಲಸ ಮಾಡಿಕೊಟ್ಟಿದ್ದೇವೆ. ಆಗ ಎಷ್ಟು ಕಮಿಷನ್ ನೀಡಿದ್ದಾರೆ ಅಂತಾ ಹೇಳಲಿ ಎಂದು ಸವಾಲು ಹಾಕಿದರು.

Key words: minister-KS Eshwarappa-former minister- ramesh jarkiholi-visit-suttur math