ಸ್ವಾತಂತ್ರ್ಯ ಪೂರ್ವದಲ್ಲಿ ಲೀಸ್ ಗೆ ಕೊಟ್ಟಿದ್ದ ಅರಣ್ಯ ಪ್ರದೇಶ ವಾಪಾಸ್ ಗೆ ನಿರ್ಧಾರ-ಸಚಿವ ಈಶ್ವರ್ ಖಂಡ್ರೆ.

Promotion

ಮೈಸೂರು,ಫೆಬ್ರವರಿ,10,2024(www.justkannada.in): ಸ್ವಾತಂತ್ರ್ಯ ಪೂರ್ವದಲ್ಲಿ ಲೀಸ್ ಗೆ ಕೊಟ್ಟಿದ್ದ ಅರಣ್ಯ ಪ್ರದೇಶವನ್ನು ವಾಪಾಸ್ ಪಡೆಯಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ,  ಬಹುದೊಡ್ಡ ಕಂಪನಿಗಳ ವಶದಲ್ಲಿ ಅರಣ್ಯ ಪ್ರದೇಶವಿದೆ. ಶೇ. 95% ಭಾಗ ಅರಣ್ಯ ಪ್ರದೇಶ ಮಡಿಕೇರಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇದೆ. ಸುಮಾರು 7 ಸಾವಿರ ಎಕರೆ ಅರಣ್ಯ ಭಾಗ ವಶಕ್ಕೆ ಪಡೆಯಬೇಕಿದೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿದೆ. ಮುಂದಿನ 6 ತಿಂಗಳಗಳ ಕಾಲಾವಕಾಶದಲ್ಲಿ ಹಿಂದಕ್ಕೆ ಪಡೆಯುತ್ತೇವೆ ಎಂದು ಹೇಳಿದರು.

ಬಂಡೀಪುರ ಪಶ್ಚಿಮಘಟ್ಟದ ದಟ್ಟ ಅರಣ್ಯ. ಇಲ್ಲಿ ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಕಿರಿಕಿರಿಯಾಗದಂತೆ ಎಲ್ಲಾ ಕ್ರಮ ವಹಿಸಲಾಗಿದೆ. ಸುಮಾರು 7 ಸಾವಿರ ಎಕರೆ ಜಮೀನು ವಿವಿಧ ಹಂತದಲ್ಲಿ ಲೀಸ್ಟ್ ಪಿರಿಯಡ್ ಮುಗಿದಿದೆ. ನೂರಾರು ಕೋಟಿ ರೂಪಾಯಿ ಬಾಕಿ ವಸೂಲಿ ಮಾಡಬೇಕು. ಜಮೀನು ವಾಪಾಸ್ ಪಡೆಯುವ ಬಗ್ಗೆ ಚಿಂತಿಸಲಾಗಿದೆ. ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚಾಳವಾಗುತ್ತಿದೆ. ಪ್ರಾಣಿ ಮಾನವ ಸಂಘರ್ಷ ತಡೆಯಬೇಕಿದೆ. ಕಾನೂನು ತೊಡಕುಗಳನ್ನು ನಿವಾರಿಸಿ ಜಮೀನುಗಳನ್ನು ವಾಪಾಸ್ ಪಡೆಯಕೊಳ್ಳತ್ತೆವೆ. ಒತ್ತುವರಿ ತೆರವು ಕಾರ್ಯವನ್ನು ಮಾಡುತ್ತಿದ್ದೇವೆ ಎಂದು  ಸಚಿವ ಈಶ್ವರ್ ಖಂಡ್ರೆ ಹೇಳಿದರು.

Key words: Minister- Ishwar Khandre -decided -return – forest -area