ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ…

kannada t-shirts

ಮೈಸೂರು,ಜೂ,7,2019(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಿಂದ ರಾಜ್ಯರಾಜಧಾನಿ ಬೆಂಗಳೂರಿನ ನಡುವೆ ವಿಮಾನಯಾನ ಆರಂಭಕ್ಕೆ  ಹಸಿರು ನಿಶಾನೆ ತೋರಲಾಯಿತು.

ಮೈಸೂರು-ಬೆಂಗಳೂರು ನಡುವಿನ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ. ಪ್ರವಾಸೋದ್ಯಮ‌ ಸಚಿವ ಸಾರಾ ಮಹೇಶ್ ಚಾಲನೆ ನೀಡಿದರು. ಈ ವೇಳೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್  ಮೇಯರ್ ಪುಷ್ಪಲತಾ ಜಗನ್ನಾಥ್ ಭಾಗಿಯಾಗಿದ್ದರು.

ಮೊದಲ ಲಕ್ಕಿ ಪ್ರಯಾಣಿಕರಿಗೆ ಕೇಕ್ ಹಾಗೂ ಬೋರ್ಡಿಂಗ್ ಪಾಸ್ ನೀಡಿ ಸಚಿವ ಜಿ.ಟಿ ದೇವೇಗೌಡ  ಹಾಗೂ ಸಂಸದ ಪ್ರತಾಪ್ ಸಿಂಹ ಶುಭ ಕೋರಿದರು. ಜತೆಗೆ ಕೇಕ್ ಕತ್ತರಿಸಿ  ಸಚಿವ ಜಿ.ಟಿ ದೇವೇಗೌಡ ಮತ್ತು ಸಂಸದ ಪ್ರತಾಪ್ ಸಿಂಹ ಪರಸ್ಪರ ಕೇಕ್ ತಿನಿಸಿದರು.

ವಾರದಲ್ಲಿ ಐದು ದಿನಗಳಕಾಲ ಮೈಸೂರು ಬೆಂಗಳೂರು  ನಡುವೆ ವಿಮಾನ ಹಾರಾಟ ನಡೆಸಲಿದೆ.  ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಈ ವಿಮಾನ ಹಾರಾಟ ಪ್ರಾರಂಭಿಸಲಾಗಿದ್ದು  ಉಡಾನ್-3 ಯೋಜನೆಯ ಎರಡನೇ ವಿಮಾನ ಇದಾಗಿದೆ.

ಇಂಡಿಯನ್ ಏರ್‌ಲೈನ್ಸ್ ಸಂಸ್ಥೆಗೆ ಸೇರಿದ 9I 540 ವಿಮಾನ ಪ್ರತಿದಿನ ಬೆಳಿಗ್ಗೆ 11.15 ಕ್ಕೆ ಮೈಸೂರಿಗೆ ಆಗಮಿಸಿ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ತೆರಳಲಿದೆ. ಈಗಾಗಲೇ ಮೈಸೂರು ಹೈದ್ರಾಬಾದ್ ಹಾಗೂ ಚೆನೈ ನಡುವೆ ಕೂಡ ವಿಮಾನ ಹಾರಾಟ ಶುರುವಾಗಿದೆ. ಪ್ರಾದೇಶಿಕ ವಿಮಾನಯಾನ ಉತ್ತೇಜನ ದೃಷ್ಟಿಯಿಂದ ವಿಮಾನ ಸೇವೆಗಳ ಆರಂಭ ಮಾಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕೊಚಿನ್,ಗೋವಾ,ಮುಂಬೈಗೆ ವಿಮಾನ ಸೇವೆ ಆರಂಭವಾಗಲಿದೆ.

Key words: minister GT Deve Gowda green signal for the flight between Mysore and Bangalore.

#mysore #bangalore  #flight #gtdevegowda #greensignal

website developers in mysore