ತಿನ್ನಲು ಕೂಳಿಲ್ಲದವನಿಗೆ ಹೋಳಿಗೆ ಕೊಟ್ಟರೆ ತಲೆತಿಕ್ಕಲು ಎಂಬಂತಾಗಿದೆ-ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಬಿಜೆಪಿ ಶಾಸಕ ವಾಗ್ದಾಳಿ..

Promotion

ಚಿತ್ರದುರ್ಗ,ಮೇ,28,2021(www.justkannada.in):  ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ದ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.jk

ಚಿತ್ರದುರ್ಗದಲ್ಲಿ ಮಾತನಾಡಿದ ಶಾಸಕ ಎಂ.ಚಂದ್ರಪ್ಪ, ಯಾರೋ ಒಬ್ಬನು ಬಂದ, ಎಲ್ಲಿಂದಲೋ ಬಂದ.  ಇಲ್ಲಿನ ವ್ಯವಸ್ಥೆ ಬಗ್ಗೆ ಗೊತ್ತಿಲ್ಲ, ಏನೋ ಹೇಳಿಕೆ ಕೊಟ್ಟ. ಯೋಗೀಶ್ವರ್ ಒಬ್ಬ ಹುಚ್ಚ. ತಿನ್ನಲು ಕೂಳಿಲ್ಲದವನಿಗೆ ಹೋಳಿಗೆ ಕೊಟ್ಟರೆ ತಲೆತಿಕ್ಕಲು ಎಂಬಂತಾಗಿದೆ ಆತನ ಪರಿಸ್ಥಿತಿ. ಅವನಿಗೆ ತಿನ್ನಲು ಮುದ್ದೆ ಇರಲಿಲ್ಲ, ಪರಿಸ್ಥಿತಿ ಸರಿ ಇರಲಿಲ್ಲ ಸೋತಿದ್ದ ಯೊಗೀಶ್ವರ್ ರಾಮನಗರ ಉಸ್ತುವಾರಿ ವಹಿಸಿಕೊಂಡಿದ್ದ ಎಂದು ಹರಿಹಾಯ್ದರು.

ರಾಮನಗರಕ್ಕೆ ನಿಲ್ಲಿಸಿದ ಅಭ್ಯರ್ಥಿ ಪಲಾಯನ ಮಾಡಿದ್ದ. ಅನಿತಾ ಕುಮಾರಸ್ವಾಮಿ ವಿರುದ್ಧದ ಅಭ್ಯರ್ಥಿಯನ್ನು ಇವನೇ ಓಡಿಸಿದ್ದ. ಅಂಥವನಿಗೆ ನಮ್ಮ ಮುಖಂಡರು ಎಂಎಲ್ ಸಿ, ಮಂತ್ರಿ ಮಾಡಿದ್ದಾರೆ. ಸಿ.ಪಿ.ಯೋಗೇಶ್ವರ್ ನಮ್ಮ ಮುಂದೆ ಬಚ್ಚಾ.  ಅವನೇನು ದೊಡ್ಡ ಮನುಷ್ಯ ಅಂತ ನಾನು ಅವನ ಬಗ್ಗೆ ಮಾತಾಡಲಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ನಾವು ಕೆಲಸ ಮಾಡಬೇಕು  ಎಂದು ಏಕವಚನದಲ್ಲೇ ಶಾಸಕ ಚಂದ್ರಪ್ಪ ಕಿಡಿಕಾರಿದರು.

Key words: minister-cp yogeshwar-mla- chandrappa-outrage