ಅರುಣ್ ಸಿಂಗ್ ಎದುರೇ ಎಲ್ಲಾ ಹೇಳ್ತೀನಿ- ಮಾಧ್ಯಮಗಳಿಗೆ ಕೈಮುಗಿದ ಸಚಿವ ಸಿಪಿ ಯೋಗೇಶ್ವರ್.

Promotion

ಬೆಂಗಳೂರು,ಜೂನ್,17,2021(www.justkannada.in): ರಾಜ್ಯ ಬಿಜೆಪಿಯಲ್ಲಿನ ಅಸಮಾಧಾನ ಕೋವಿಡ್, ಪಕ್ಷ ಸಂಘಟನೆ ಮತ್ತೆತ್ತರ ವಿಚಾರದ ಬಗ್ಗೆ ಚರ್ಚಿಸಲು  ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಬಿಜೆಪಿ ಉಸ್ತುವಾರಿ ಆರುಣ್ ಸಿಂಗ್ , ಈಗಾಗಲೇ ಸಚಿವರ ಜತೆ ಚರ್ಚೆ ನಡೆಸಿದ್ದಾರೆ. ಇಂದು ಬಿಜೆಪಿ ಶಾಸಕರ ಜತೆ ಸಭೆ ನಡೆಸಲಿದ್ದಾರೆ.jk

ಈ ನಡುವೆ ಶಾಸಕರು ತಮ್ಮ ಸಮಸ್ಯೆ, ಗೊಂದಲಗಳನ್ನ ಅರುಣ್ ಸಿಂಗ್ ಬಳಿ ಹೇಳಬಹುದು. ಈ ಹಿನ್ನೆಲೆಯಲ್ಲಿ ಈಗಾಗಲೇ ಸಚಿವ ಸಿ.ಪಿ ಯೋಗೇಶ್ವರ್ ಇಂದು ಬೆಳಿಗ್ಗೆ 11.30ಕ್ಕೆ ಅರುಣ್ ಸಿಂಗ್ ಭೇಟಿಯಾಗಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಅವರು, ಮಾಧ್ಯಮಗಳಿಗೆ ಕೈಮುಗಿದು ಮಾತನಾಡಲ್ಲ ಎಂದ ಘಟನೆ ನಡೆಯಿತು.

ಹಾಗೆಯೇ ಮೀಟಿಂಗ್ ಗೆ ಹೋಗ್ತೀನಿ. ಅರುಣ್ ಸಿಂಗ್ ಎದುರೇ ಎಲ್ಲವನ್ನೂ ಹೇಳುತ್ತೇನೆ ಎಂದು ಸಿ.ಪಿ ಯೋಗೇಶ್ವರ್ ಮಾಧ್ಯಮಗಳಿಗೆ ತಿಳಿಸಿದರು. ಸಿಎಂ ಬದಲಾವಣೆಗೆ ತೆರೆಮರೆಯಲ್ಲಿ ಪ್ರಯತ್ನಿಸಲಾಗುತ್ತಿದ್ದು ಈ ವಿಚಾರದಲ್ಲಿ ಸಚಿವ ಸಿ.ಪಿ ಯೋಗೇಶ್ವರ್ ಹೆಸರು ಕೇಳಿ ಬಂದಿದೆ.

Key words: Minister -CP Yogeshwar-meet-arun singh- Media