ಯೋಗ, ಯೋಗ್ಯತೆ ಇರುವವರಿಗೆ ರಾಜ್ಯದ ಸಿಎಂ ಪಟ್ಟ: ಸಚಿವ ಬಿ.ಸಿ.ಪಾಟೀಲ್

Promotion

ಬೆಂಗಳೂರು, ಜೂನ್ 12, 2022 (www.justkannada.in): ರಾಜ್ಯದ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆಗೆ ಸಚಿವ ಬಿ.ಸಿ.ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಯಾರಿಗೆ ಯೋಗ ಇದೆಯೋ ಅವರು ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ. ಇದರೊಂದಿಗೆ ಯೋಗ್ಯತೆಯೂ ಇರಬೇಕು ಎಂದು ಬಿ.‌ಸಿ. ಪಾಟೀಲ್ ಮಾರ್ಮಿಕವಾಗಿ ಮಾತನಾಡಿದ್ದಾರೆ.

ಬಿ.ವೈ. ವಿಜಯೇಂದ್ರ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಪ್ರಶ‍್ನೆಗೆ ಉತ್ತರಿಸಿದ ಅವರು, , ‘ಮುಖ್ಯಮಂತ್ರಿ ಆಗಲು ಜನರ ಹಾಗೂ ಹೈಕಮಾಂಡ್ ಆಶೀರ್ವಾದ ಬೇಕು ಎಂದು ಹೇಳಿದರು.

ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ಮುಂದೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಇನ್ನೂ ಹೆಚ್ಚಿನ ಮಂದಿ ಬಿಜೆಪಿಗೆ ಬರುವವರಿದ್ದಾರೆ. ಈಗಲೇ ಹೇಳಿದರೆ ಅವರನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಮಾಡುತ್ತಾರೆ’ ಎಂದು ಹೇಳಿದ್ದಾರೆ.