ಶಾಲೆಗಳಲ್ಲಿ ಧ್ಯಾನದ ಬಗ್ಗೆ ಟೀಕಿಸಿದ್ಧ ಸಿದ್ಧರಾಮಯ್ಯಗೆ ಸಚಿವ ಬಿ.ಸಿ ನಾಗೇಶ್ ತಿರುಗೇಟು.

ಬೆಂಗಳೂರು,ನವೆಂಬರ್,5,2022(www.justkannada.in): ಶಾಲಾ ಕಾಲೇಜುಗಳಲ್ಲಿ ಹತ್ತು ನಿಮಿಷ ಧ್ಯಾನ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಟೀಕಿಸಿದ್ಧ  ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಬಿ.ಸಿ ನಾಗೇಶ್, 10 ನಿಮಿಷದ ದ್ಯಾನದ ವಿಚಾರದಲ್ಲೂ ಗೊಂದಲ ಸೃಷ್ಟಿಗೆ ಪ್ರಯತ್ನ ಮಾಡುತ್ತಿರುವುದು ದುರಾದೃಷ್ಟಕರ. ಮಕ್ಕಳು ಧ್ಯಾನ ಮಾಡುತ್ತಿರುವುದು ಹೇಗೆ ಗಿಮಿಕ್ ಆಗುತ್ತೆ. ಅದನ್ನು ನೀವು ಜನತೆಗೆ ವಿವರಿಸುವಿರಾ  ಎಂದು ಟಾಂಗ್ ನೀಡಿದ್ದಾರೆ.

ಸಂಶೋಧಕರು, ವೈದ್ಯರು, ವಿಜ್ಞಾನಿಗಳ ಪ್ರಕಾರ, ಯೋಗ ಮತ್ತು ಧ್ಯಾನ ಮಾಡುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಅತ್ಯಂತ ಉಪಯುಕ್ತ. ಆದರೆ, ನೀವು ಮಾತ್ರ ಧ್ಯಾನ, ಯೋಗ ಮಾಡಿದರೆ ಮಕ್ಕಳು ಕುಗ್ಗಿ ಹೋಗುತ್ತಾರೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಿಸಿ ನಾಗೇಶ್ ಕಿಡಿಕಾರಿದ್ದಾರೆ.

Key words: Minister- BC Nagesh – Siddaramaiah -criticizing -meditation -schools.