ದೇಶದಲ್ಲೇ ಖಾಸಗಿ ಅಪಾರ್ಟ್‌ಮೆಂಟ್ ಗಳ ಪೈಕಿ ಅತ್ಯಧಿಕ ಸಾಮರ್ಥ್ಯ  ಬ್ರಿಗೇಡ್ ಗೇಟ್ ವೇ ತಾರಸಿ ಸೌರ ವಿದ್ಯುತ್ ಉತ್ಪಾದನೆಗೆ ಸಚಿವ ಅಶ್ವತ್ಥನಾರಾಯಣ್ ಚಾಲನೆ.

ಬೆಂಗಳೂರು,ಅಕ್ಟೋಬರ್,9,2021(www.justkannada.in):  ನಗರದ ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ ನ ತಾರಸಿಯಲ್ಲಿ ಅಳವಡಿಸಲಾಗಿರುವ 354 ಕಿಲೋವಾಟ್ ಸಾಮರ್ಥ್ಯದ ತಾರಸಿ ಸೌರ ವಿದ್ಯುತ್ ಉತ್ಪಾದನೆಗೆ ಸ್ಥಳೀಯ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಶನಿವಾರ ಚಾಲನೆ‌ ನೀಡಿದರು.

ಇಡೀ ದೇಶದಲ್ಲಿ ಖಾಸಗಿ ಅಪಾರ್ಟ್ ಮೆಂಟ್ ಗಳ ಪೈಕಿ ಅಳವಡಿಸಲಾಗಿರುವ ಅತ್ಯಧಿಕ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಇದು ಎನ್ನಲಾಗಿದೆ.  ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಇಡೀ ಸಮಾಜವು ಈ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆ ಪ್ರಮುಖ ವಿಷಯವಾಗಿದೆ. ನಾವು ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡರೂ ಪರಿಸರಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ 100 ಗಿಗಾವಾಟ್ ಗಳಷ್ಟು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಗುರಿಯನ್ನು ನಿಗದಿಗೊಳಿಸಿದ್ದಾರೆ. ಈ ಗುರಿ ಮುಟ್ಟಲು ಗಣನೀಯ ಪ್ರಮಾಣದಲ್ಲಿ ಕೊಡುಗೆ ನೀಡುವ ಜೊತೆಗೆ, ವಿದ್ಯಾರ್ಥಿ ಸಮುದಾಯವನ್ನು ಸುಸ್ಥಿರ ಅಭಿವೃದ್ಧಿ ಬಗ್ಗೆ ಸಂವೇದನಾಶೀಲಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಡಿಯ (ಎನ್ಇಪಿ-2020) ಶಿಕ್ಷಣ ಕ್ರಮದಲ್ಲಿ ಒತ್ತುಕೊಡಲಾಗುವುದು ಎಂದು ಅಶ್ವತ್ ನಾರಾಯಣ್ ತಿಳಿಸಿದರು.

ಈ ಸೌರ ವಿದ್ಯುತ್ ಉತ್ಪಾದನಾ ವ್ಯವಸ್ಥೆಯ ಅಳವಡಿಕೆಯೊಂದಿಗೆ ಬ್ರಿಗೇಡ್ ಗೇಟ್ ವೇ ಒಕ್ಕೂಟವು ಪರಿಸರ ಸ್ನೇಹಿಯಾಗುವತ್ತ ಮತ್ತೊಂದು ದೃಢವಾದ ಹೆಜ್ಜೆಯನ್ನು ಇರಿಸಿದೆ. ಈ ಮುಂಚೆಯೇ ಇಲ್ಲಿ ನೀರಿನ ಮರುಬಳಕೆ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳನ್ನು ಅಳವಡಿಸಲಾಗಿತ್ತು ಎಂದರು. ಇದೇ ವೇಳೆ, ಇಡೀ ಸಮಾಜಕ್ಕೆ ಮಾದರಿಯಾಗುವಂತೆ ಸ್ವಂತ ಹಣದಲ್ಲಿ ಸೌರ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಂಡಿರುವುದಕ್ಕಾಗಿ ಬ್ರಿಗೇಡ್ ಗೇಟ್ ವೇ ಒಕ್ಕೂಟದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿ ಅಭಿನಂದಿಸಿದರು.

ಬ್ರಿಗೇಡ್ ಗೇಟ್ ವೇ ಒಕ್ಕೂಟದ ಅಧ್ಯಕ್ಷ ಮಹೇಶ್, ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಘು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದರಾಜು ಮತ್ತಿತರರು ಇದ್ದರು.

ENGLISH SUMMARY….

Claimed to be the highest capacity (354 KW) among private apartments in the country
Brigade Gateway Enclave equipped with solar rooftop power generation system

Bengaluru: Solar rooftop power generation of 354 KW capacity set up at the Brigade Gateway Enclave, said to be the highest in the country among private apartments, was launched on Saturday.

Speaking on the occasion, Dr.C.N.Ashwatha Narayana, who is the jurisdictional MLA and the Minister for IT/Bt, said, entire society should move in this direction to achieve sustainable development goals.

Self Generation of Power is an important aspect towards realizing sustainable development. Any project or developmental work we undertake should not become a threat to the environment, the Minister stated.

Prime Minister Narendra Modi has set a target of generating 100 Giga Watts of renewable energy in the country. Besides striving to contribute towards this, students will be sensitized about the importance of sustainable development as per National Education Policy (NEP- 2020), Narayana told.

“with this solar power rooftop, Brigade Gateway has put forward one more step towards becoming a sustainable enclave. In addition to the apartment already having water recycling and waste disposal management, now has moved further to become eco friendly by setting up solar power generation system” the Minister said.

Narayana appreciated the work of the Brigade Gateway Association for installing the solar power set up and congratulated for this.

Mahesh Kumar, President, Brigade Gateway Association, Raghu, EE, BESCOM, Siddaraju, AEE, BESCOM, and others were present.

Key words: Minister – Aswaththanarayan-Solar- Power –Generation-drive