ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಮಿನಿ ಬುಲೇರೋ ಡಿಕ್ಕಿ: ಓರ್ವ ಸ್ಥಳದಲ್ಲೇ ಸಾವು…

Promotion

ಮೈಸೂರು,ಸೆ,9,2019(www.justkannada.in): ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಮಿನಿ ಬುಲೇರೋ ಗೂಡ್ಸ್ ಡಿಕ್ಕಿಯಾಗಿ  ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಕಂಚಮಳ್ಳಿ ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದರೇ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇತರ ಹಲವು ಮಂದಿಗೆ ಗಾಯಗಳಾಗಿದೆ. ಸ್ಥಳಕ್ಕೆ ಎಚ್.ಡಿ.ಕೋಟೆ ಠಾಣಾ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು.

ಮೈಸೂರು ಕಡೆಯಿಂದ ಕೇರಳ ರಾಜ್ಯಕ್ಕೆ ಮಿನಿ ಬುಲೇರೋ ಗೂಡ್ಸ್ ವಾಹನದಲ್ಲಿ ತರಕಾರಿ ಸಾಗಿಸಲಾಗುತ್ತಿತ್ತು. ಇನ್ನು ಮಿತಿಮೀರಿ ಮದ್ಯ ಸೇವನೆಯೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.  ಮರದ ನಡುವೆ ಸಿಲುಕಿಕೊಂಡ ವಾಹನದೊಳಗಿನಿಂದ‌ ಮೃತ ದೇಹ‌ ಸೇರಿ ಮೂರು ಮಂದಿ ಗಾಯಾಳುಗಳನ್ನ ಹೊರ ತೆಗೆಯಲು ಪೊಲೀಸರು ಹರಸಾಹಸಪಟ್ಟರು.  ಕಟ್ಟರ್ ನಿಂದ ಕಟ್ ಮಾಡಿ ವಾಹನ ಹೊರ ತೆಗೆಯಲಾಯಿತು.

Key words: Mini Bulero -collided –tree-  Death-mysore