ಮೇಕೆದಾಟು ಯೋಜನೆ ವಿಚಾರವೂ ಮಾತುಕತೆ ಮೂಲಕ ಬಗೆಹರಿಯಲಿ- ಕೇಂದ್ರ ಜಲ‌ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್

Promotion

ಬೆಂಗಳೂರು,ಮಾರ್ಚ್,5,2022(www.justkannada.in):  ಮೇಕೆದಾಟು ಯೋಜನೆ ವಿಚಾರವೂ ಮಾತುಕತೆ ಮೂಲಕ ಬಗೆಹರಿಯಲಿ ಎಂದು ಕೇಂದ್ರ ಜಲ‌ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಾವೇರಿ ನದಿಗೆ ಅಡ್ಡಲಾಗಿ ತಮಿಳುನಾಡಿನ ಗಡಿಯಲ್ಲಿ ಕರ್ನಾಟಕದ ಮೇಕೆದಾಟು ಕುಡಿಯುವ ನೀರು ಯೋಜನೆ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕಿದೆ. ಈ ಕುರಿತು ಮಾತನಾಡಿದ ಕೇಂದ್ರ ಜಲ‌ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್,  ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವ ವಿಚಾರ ಒಳ್ಳೆಯದೇ. ನಾನು ಯೋಜನೆ ಆಗಲಿ ಅನ್ನೋ ಆಶಯ ವ್ಯಕ್ತಪಡಿಸುತ್ತೇನೆ. ಆದರೆ ನ್ಯಾಯಾಧಿಕರಣದಲ್ಲಿ ಪ್ರಕರಣ ಇರುವುದರಿಂದ ಹೆಚ್ಚಿನದೇನೂ ಮಾತನಾಡುವುದಿಲ್ಲ ಎಂದಿದ್ದಾರೆ.

ಮೇಕೆದಾಟು ಪ್ರಕರಣ ನ್ಯಾಯಾಧಿಕರಣದಲ್ಲಿ ಇರುವುದರಿಂದ ನಾನು ಆ ಬಗ್ಗೆ ಮಾ‌ತನಾಡಲ್ಲ. ಆದರೂ ಎರಡೂ ರಾಜ್ಯಗಳು ಕುಳಿತು ಮಾತನಾಡಿದ್ರೆ ಯೋಜನೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಿದ್ದವಿದೆ ಎಂದು ಕೇಂದ್ರ ಜಲ‌ ಶಕ್ತಿ ಸಚಿವ ಶೇಖಾವತ್ ಹೇಳಿದ್ದಾರೆ.

Key words: mekedatu-resolved-Union Minister -Gajendra Singh Shekhawat