ಚಿರು ಫೋಟೋ ಜತೆ ಪುತ್ರನ ಆಟ: ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ಫೋಸ್ಟ್ ವೈರಲ್!

Promotion

ಬೆಂಗಳೂರು, ಮೇ 03, 2021 (www.justkannada.in): 

ನಟಿ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

ಮೇಘನಾ ತಮ್ಮ ಮಗ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

ವೀಡಿಯೋದಲ್ಲಿ ನಟಿ ಮೇಘನಾ ರಾಜ್ ಮಗನನ್ನು ಎತ್ತಿಕೊಂಡು ಚಿರಂಜೀವಿ ಸರ್ಜಾ ಫೋಟೋವನ್ನು ತೋರಿಸುತ್ತಿದ್ದಾರೆ.

ಎರಡು ಕೈಗಳಿಂದ ಫೋಟೋವನ್ನು ಮುಟ್ಟಿ ಮುಗುಳುನಗೆ ಬೀರಿ, ಅಪ್ಪನ ಫೋಟೋದೊಂದಿಗೆ ಚಿಕ್ಕ ಮಗು ಆಟವಾಡುತ್ತಿದೆ. ಈ ವೀಡಿಯೋವನ್ನು ಮೇಘನಾ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.