ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸದ್ಭಳಕೆಗೆ ಶೀಘ್ರವಾಗಿ ಸಭೆ- ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಭರವಸೆ…

ಬೆಂಗಳೂರು, ಸೆಪ್ಟಂಬರ್, 11,2020(www.justkannada.in): ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ನಿಧಿ ಬಳಕೆ ಬಗ್ಗೆ ಯೋಜನೆ ರೂಪಿಸುವ ಸಂಬಂಧ ಶೀಘ್ರವಾಗಿ ಸಭೆ ಕರೆಯುವುದಾಗಿ‌ ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ಭರವಸೆ ನೀಡಿದ್ದಾರೆ.

ಪತ್ರಿಕಾ ವಿತರಕರಿಗೆ ಸರ್ಕಾರ 2 ಕೋಟಿ ರೂ ನಿಧಿ ನೀಡಿ ಎರಡೂವರೆ ವರ್ಷ ಕಳೆದರೂ ನಯಾ ಪೈಸೆ ಹಣ ಸದ್ಭಳಕೆ ಆಗಿಲ್ಲ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರು ಪತ್ರ ಬರೆದು ಗಮನ‌ಸೆಳೆದಿದ್ದು, ಅದಕ್ಕೆ ಆಯುಕ್ತರು ಕೂಡಲೇ ಸ್ಪಂದಿಸಿದ್ದಾರೆ.meeting-welfare-benefits-press-distributors-information-department-commissioner-dr-ps-harsha

ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗಾಗಿ ಎರಡು ಕೋಟಿ ಹಣದ ನಿರ್ವಹಣೆಯನ್ನು ಮಾಧ್ಯಮ ಅಕಾಡೆಮಿಗೆ ವಹಿಸಲಾಗಿತ್ತು. ಈ ಸಂಬಂಧ ಸಭೆ ಕರೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ವಾರ್ತಾ ಇಲಾಖೆಯ ಆಯುಕ್ತರಾದ ಡಾ.ಪಿ.ಎಸ್.ಹರ್ಷ ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆಯ ಜೊತೆಯಲ್ಲಿ ಮಾತನಾಡಿ, ಅಲ್ಲಿಯೂ ಅಸಂಘಟಿತ ಪತ್ರಿಕಾ ವಿತರಕರಿಗೆ ಸೌಲಭ್ಯ ಕೊಡಿಸಬೇಕು ಎನ್ನುವ ಕೆಯುಡಬ್ಲ್ಯೂಜೆ ಮನವಿಗೂ ಆಯುಕ್ತರು ಸ್ಪಂಧಿಸಿದ್ದು, ಈ ಬಗ್ಗೆ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.meeting-welfare-benefits-press-distributors-information-department-commissioner-dr-ps-harsha

ಮಳೆ, ಚಳಿ, ಬಿಸಿಲೆನ್ನದೆ ಮನೆ ಮನೆಗೆ ನಿತ್ಯವೂ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರಿಗೆ ಕ್ಷೇಮಾಭಿವೃದ್ಧಿ ಯೋಜನೆ ರೂಪಿಸಬೇಕು ಎಂದು ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿ ಪತ್ರ ಬರೆದಿದ್ದರು.

Key words: meeting – welfare -benefits – press –distributors- Information Department –Commissioner- Dr. PS Harsha