ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರ ಸಭೆ: ದೇಶವ್ಯಾಪಿ ರೈತರ ಹೋರಾಟ, ಮುಂದಿನ ನಡೆ ಕುರಿತು ಹಲವು ತೀರ್ಮಾನ.

ಚೆನ್ನೈ,ಆಗಸ್ಟ್,21,2021(www.justkannada.in): ದೆಹಲಿ ರೈತರ ಹೋರಾಟ,  ದೇಶವ್ಯಾಪಿ ಮುಂದಿನ ನಡೆ ಕುರಿತು ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರ ಸಭೆ ಚೆನ್ನೈನಲ್ಲಿ ನಡೆಯಿತು.

ರಾಷ್ಟ್ರೀಯ ರೈತ ಸಂಘಟನೆಗಳ ಮುಖಂಡರ ಸಭೆ ಇಂದು ಚೆನ್ನೈನಲ್ಲಿ ನಡೆಯಿತು ಇದರಲ್ಲಿ ಭಾಗವಹಿಸಿ  ಉದ್ಘಾಟನೆ ನೆರವೇರಿಸಿದ ಮಾತನಾಡಿದರು ,

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದಾಗಬೇಕು. ಕನಿಷ್ಠ ಬೆಂಬಲ ಬೆಲೆ ಖಾತ್ರಿ ಶಾಸನವಾಗಬೇಕು ಎಂದು ಒತ್ತಾಯಿಸಿ, ಕಾಯ್ದೆ ಜಾರಿಯಿಂದ ರೈತರಿಗೆ ಆಗುವ ಮಾರಕ ಪರಿಣಾಮಗಳ ಬಗ್ಗೆ ದೇಶಾದ್ಯಂತ ರೈತರನ್ನು ಜಾಗೃತಿ ಮಾಡಲು ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸಂಯುಕ್ತ ಕಿಸಾನ್  ಮೋರ್ಚ ಅಡಿಯಲ್ಲಿ ಕಿಸಾನ್ ಯಾತ್ರಾ ನಡೆಸಲಾಗುತ್ತಿದೆ, ಭಾರತವನ್ನ ಈಸ್ಟ್ ಇಂಡಿಯಾ ಕಂಪನಿ ರೀತಿ, ಸ್ವದೇಶಿ ಬಂಡವಾಳಶಾಹಿಗಳ ಕಂಪನಿಗಳ ರಾಷ್ಟ್ರವಾಗಿ ಮಾಡಲು ಬಿಡುವುದಿಲ್ಲ. ಅದಕ್ಕಾಗಿ ರೈತರು ನಿರಂತರ ಹೋರಾಟ ನಡೆಸುತಿದ್ದಾರೆ ಎಂದು ರಾಷ್ಟ್ರೀಯ ಜಲತಜ್ಞ ಡಾ ರಾಜೇಂದ್ರಸಿಂಗ್ ತಿಳಿಸಿದರು.

ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡರಾದ ರಾಕೇಶ್ ಟಿಕಾಯತ್,   ಯದುವೀರಸಿಂಗ್ ಮಾತನಾಡಿ ಕೇಂದ್ರದ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕು.  ಎಂಎಸ್ ಪಿಗೆ ಶಾಸನಬದ್ಧ ಖಾತ್ರಿ ಕಾಯ್ದೆ ಜಾರಿ ಬರಬೇಕು. ಎಂ ಎಸ್ ಪಿ ಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನಗಳ ಖರೀದಿ ಶಿಕ್ಷಾರ್ಹ ಅಪರಾಧ ಎಂದು ಕಾನೂನು ಆಗಬೇಕು, ಕೃಷಿ ಉತ್ಪನ್ನಗಳ ಖರೀದಿ ಸಮಯದಲ್ಲಿ ಆಗುವ ಸಮಸ್ಯೆಗಳ ಪರಿಹಾರಕ್ಕೆ ರೈತರು ನ್ಯಾಯಾಲಯಕ್ಕೆ ಹೋಗುವ ಅಧಿಕಾರ ಸಿಗಬೇಕು, ಎನ್ನುವ  ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಯಿತು .

ತಮಿಳುನಾಡಿನ  ಜಂಟಿ ರೈತ ಸಂಘಟನೆಗಳ ಒಕ್ಕೂಟದ ಪರವಾಗಿ ಗುರುಸ್ವಾಮಿ, ರೈತರ ಹೋರಾಟವನ್ನು ಹತ್ತಿಕ್ಕಲು ಹಲವು ರೀತಿಯಲ್ಲಿ ಅಪಪ್ರಚಾರಗಳನ್ನು ಮಾಡಿತು. ಖಲಿಸ್ತಾನಿಗಳು ಪಾಕಿಸ್ತಾನಿಗಳು ದೇಶದ್ರೋಹಿಗಳು ದಳ್ಳಾಳಿಗಳು ಎಂದು ಕರೆದದ್ದಲ್ಲದೇ ಚಳುವಳಿ ಮಾಡುವ ರಸ್ತೆಗಳನ್ನು ಅಗೆದು ಹಳ್ಳ ಮಾಡಿದರು. ಇಷ್ಟೆಲ್ಲ  ಕಿರುಕುಳ ನೀಡಿದರು ರೈತರ ಪ್ರಬಲ ಹೋರಾಟ ನಿಲ್ಲಲಿಲ್ಲ.  ಇದು ರೈತರ ಅಳಿವು-ಉಳಿವಿನ ಪ್ರಶ್ನೆ ಚುನಾವಣೆ ಮೊದಲು ರೈತರೇ ದೇಶದ ಬೆನ್ನೆಲುಬು ಅನ್ನುತ್ತಾರೆ ಅಧಿಕಾರಕ್ಕೆ ಬಂದ ನಂತರ ರೈತರೇ ನಮ್ಮ ಸೇವಕರು ಎಂದು ಕಾಣುತ್ತಾರೆ ಎಂದರು.

Key words: Meeting -Farmer Leaders -South Indian States-Many decisions