ಚೀನಾದಲ್ಲಿ ನ್ಯೂಸ್ ಓದುತ್ತಿದೆ ಮೊದಲ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮಹಿಳಾ ನ್ಯೂಸ್ ಆ್ಯಂಕರ್‌

ಬೀಜಿಂಗ್‌:ಮೇ-7:(www.justkannada.in) ಜಗತ್ತಿನ ಮೊದಲ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (ಕೃತಕ ಬುದ್ಧಿಮತ್ತೆ) ಪುರುಷ ನ್ಯೂಸ್‌ ಆ್ಯಂಕರ್‌ ನನ್ನು ಕಳೆದ ವರ್ಷವಷ್ಟೇ ಪರಿಚಯಿಸಿದ್ದ ಚೀನಾ
ಈಗ ಮೊದಲ ಮಹಿಳಾ ಕೃತಕ ಬುದ್ಧಿಮತ್ತೆ ನ್ಯೂಸ್‌ ಆ್ಯಂಕರ್‌ ನ್ನು ಸೃಷ್ಠಿಸಿದೆ.

ಹೌದು. ಜಗತ್ತಿನ ಮೊದಲ ರೋಬೊಟ್‌ ಮಹಿಳಾ ಟೀವಿ ನ್ಯೂಸ್‌ ಆ್ಯಂಕರ್‌ ಳನ್ನು ನ್ಯೂಸ್ ಏಜೆನ್ಸಿಯೊಂದು ಸೃಷ್ಟಿಸಿದೆ. ಚೀನಾದ ಪ್ರಸಿದ್ಧ ಕ್ಸಿನ್ಹುವಾ ನ್ಯೂಸ್‌ ಏಜೆನ್ಸಿಯು ಕ್ಸಿನ್‌ ಕ್ಸಿಯಾಮೆಂಗ್‌ ಹೆಸರಿನ ನ್ಯೂಸ್ ಆಂಕರ್ ನ್ನು ಸುಷ್ಠಿಸಿದ್ದು, ಈ ಆ್ಯಂಕರ್‌ ಮಾರ್ಚ್ ತಿಂಗಳಿಂದಲ್ಲಿ ನ್ಯೂಸ್‌ ಓದಲು ಆರಂಭಿಸಿದೆ.

ಕ್ಸಿನುವಾ ನ್ಯೂಸ್‌ ಏಜೆನ್ಸಿಯಲ್ಲಿ ರೋಬೊಟ್‌ಗಳು ಈಗಾಗಲೇ 3400 ವರದಿಗಳನ್ನು ಬರೆದಿವೆ. ಈಗಲೂ ಈ ನ್ಯೂಸ್‌ ಏಜೆನ್ಸಿಯಲ್ಲಿ ಹಲವಾರು ರೋಬೊಟ್‌ಗಳು ಪತ್ರಕರ್ತರಾಗಿ ಕೆಲಸ ಮಾಡುತ್ತಿವೆ. ಅದರ ಜೊತೆಗೆ ಸುದ್ದಿವಾಹಿನಿಯಲ್ಲಿ ಕೃತಕ ಆ್ಯಂಕರ್‌ಗಳನ್ನು ಸೃಷ್ಟಿಸುವ ಯತ್ನದಲ್ಲೂ ಕ್ಸಿನ್ಹುವಾ ಏಜೆನ್ಸಿ ಯಶಸ್ವಿಯಾಗಿರುವುದು ವಿಶೇಷ.

ಕೃತಕ ಬುದ್ಧಿಮತ್ತೆಯ ಸಂಶೋಧನೆಯಲ್ಲಿ ಅಮೆರಿಕ ಹಾಗೂ ಜಪಾನನ್ನೂ ಹಿಂದಿಕ್ಕಿರುವ ಚೀನಾ ಈಗ ಸುದ್ದಿವಾಚಕರನ್ನೂ ಸೃಷ್ಠಿಸುವ ಮೂಲಕ ಮಾಧ್ಯಮ ಕ್ಷೇತ್ರದಲ್ಲೂ ಹೊಸ ಬೆಳವಣಿಗೆಯೊಂದಿಗೆ ದಾಪುಗಾಲಿಟ್ಟಿದೆ.

ಚೀನಾದಲ್ಲಿ ನ್ಯೂಸ್ ಓದುತ್ತಿದೆ ಮೊದಲ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮಹಿಳಾ ನ್ಯೂಸ್ ಆ್ಯಂಕರ್‌

Meet The World’s First Female AI News anchor

China’s Xinhua News Agency unveiled its latest effort to deliver content via artificial intelligence by introducing Xin Xiaomeng, the Agency’s first female-gendered AI news presenter