ವೈದ್ಯೆರೂಪದ ದುರ್ಗೆಯ ಪ್ರತಿಮೆ ಚಿತ್ರ : ಸಾಮಾಜಿಕ ಜಾಲತಾಣದಲ್ಲಿ ಜನ ಫಿದಾ…!

Promotion

ಬೆಂಗಳೂರು,ಅಕ್ಟೋಬರ್,20,2020(www.justkannada.in) : ದುರ್ಗಾಪೂಜೆ ಹಿನ್ನೆಲೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತಯಾರಾಗಿರುವ ವೈದ್ಯೆರೂಪದ ದುರ್ಗೆಯ ಪ್ರತಿಮೆಗೆ ಸಾಮಾಜಿಕ ಜಾಲತಾಣದಲ್ಲಿ ಜನ ಫಿದಾ ಆಗಿದ್ದಾರೆ.

jk-logo-justkannada-logo

ಕರ್ನಾಟಕದಲ್ಲಿ ದಸರಾ ಈಗಾಗಲೇ ಆರಂಭವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಇನ್ನೆನ್ನು ಆರಂಭವಾಗಲಿದೆ. ದುರ್ಗಾಪೂಜೆಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ. ದುರ್ಗಾ ಮೂರ್ತಿಗಳು ಸಿದ್ಧವಾಗುತ್ತಿದ್ದು, ವೈದ್ಯೆರೂಪದ ದುರ್ಗೆಯ ಪ್ರತಿಮೆ ಎಲ್ಲರೂ ಸೆಳೆಯುತ್ತಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯೆ

Medicinal-Sculpture-Statue-social media-People-Fida 

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ತಯಾರಾಗಿರುವ ಈ ಮೂರ್ತಿ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ. ದುರ್ಗೆಯನ್ನು ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯೆಯಾಗಿ ಚಿತ್ರಿಸಲಾಗಿದೆ. ಮೂರ್ತಿಯನ್ನು ನಿರ್ಮಿಸಿದ ಕಲಾವಿದನ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೂರ್ತಿಯ ವಿಶೇಷತೆ ಏನು?Medicinal-Sculpture-Statue-social media-People-Fida 

ಮೂರ್ತಿಯಲ್ಲಿ ವೈದ್ಯರ ಕೋಟ್ ಧರಿಸಿ ಮಹಿಷಾಸುರ ಎಂಬ ರಾಕ್ಷಸನೊಂದಿಗೆ ಹೋರಾಡುವ ವೈದ್ಯನಾಗಿ ಚಿತ್ರಿಸಲಾಗಿದೆ. ಕೈಯಲ್ಲಿ ಸಿರೆಂಜ್ ನೀಡಲಾಗಿದ್ದು, ಅದು ಕೊರೊನಾಸುರನ್ನು ಕೊಲಲ್ಲು ಬಳಸುತ್ತಿದೆ. ಇತ್ತ ಕೊರೊನಾ ವಾರಿಯರ್ಸ್ ಗಳಿಗೆ ಗೌರವ ಸಲ್ಲಿಸಿದಂತಿದೆ.Medicinal-Sculpture-Statue-social media-People-Fida 

ಗಣೇಶ, ಸುಬ್ರಹ್ಮಣ್ಯ ಅವರನ್ನು ಪೊಲೀಸ್ ಅಧಿಕಾರಿ ಮತ್ತು ನೈರ್ಮಲ್ಯ ಕೆಲಸಗಾರರೆಂದು, ಲಕ್ಷ್ಮೀ ಮತ್ತು ಸರಸ್ವತಿಯನ್ನು ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತೆಯಾಗಿ ಚಿತ್ರಿಸಲಾಗಿದೆ.  ಟ್ವೀಟರ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರವು ವೈರಲ್ ಆಗಿದೆ.

key words : Medicinal-Sculpture-Statue-social media-People-Fida