ಮೆಡಿಕಲ್‌ ಕಾಲೇಜ್ ಕ್ವಾರ್ಟಸ್​ ನಲ್ಲಿ ಚಿರತೆ ಪ್ರತ್ಯಕ್ಷ…!

Promotion

ಚಾಮರಾಜನಗರ,ಜನವರಿ,07,2021(www.justkannada.in) : ನಗರದ ಯಡಬೆಟ್ಟದ ತಪ್ಪಲ್ಲಿನ ಬಳಿಯ ಮೆಡಿಕಲ್‌ ಕಾಲೇಜಿನ ಕ್ವಾರ್ಟಸ್​ಗೆ ಚಿರತೆ ನುಗ್ಗಿದೆ.jk-logo-justkannada-mysoreನಗರದ ಹೊರವಲಯದಲ್ಲಿರುವ ಮೆಡಿಕಲ್‌ ಕಾಲೇಜಿನ ವೈದ್ಯರು ವಾಸ‌ ಮಾಡುತ್ತಿರುವ ಕ್ವಾರ್ಟಸ್‌ನ ಮೊದಲ ಮಹಡಿಗೆ ಬುಧವಾರ ರಾತ್ರಿ ಚಿರತೆ ಬಂದಿದೆ.

ಚಿರತೆಯನ್ನು ಕ್ಬಾರ್ಟನ್​ನ ಮೊದಲ ಮಹಡಿಯಲ್ಲಿ ಕಂಡ ಮೆಡಿಕಲ್ ಕಾಲೇಜು ಡೀನ್ ಡಾ.ಸಂಜೀವ್ ಅವರ ಪತ್ನಿ ಭಯದಿಂದ ಕಿರುಚಿಕೊಂಡಿದ್ದಾರೆ. ಅಡುಗೆ ಕೆಲಸ ಮಾಡುತ್ತಿದ್ದ ಶಿವ ಕೂಡ ಸ್ಥಳದಿಂದ ಓಡಿದ್ದಾನೆ.Medical,College,Quartus,Leopard,Live ...!ಜನರನ್ನು ಕಂಡು ವಿಚಲಿತಗೊಂಡ ಚಿರತೆಯೂ ಮಹಡಿಯಿಂದ ಕೆಳಗಿಳಿದು ಓಡಿ ಹೋಗಿದೆ. ಚಿರತೆ ಮಹಡಿಯಿಂದ ಕೆಳಗಿಳಿಯುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

key words : Medical-College-Quartus-Leopard-Live …!