ಡಿ.ಆರ್‌.ಡಿ.ಒ ಮತ್ತು ಡಿ ಎಫ್ ಆರ್ ಎಲ್ ವತಿಯಿಂದ ವಸ್ತು ಪ್ರದರ್ಶನ: ಮೈಸೂರು ನಗರ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಚಾಲನೆ

Promotion

ಮೈಸೂರು,ಡಿಸೆಂಬರ್,13,2021(www.justkannda.in):  ರಕ್ಷಣಾ  ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್‌.ಡಿ.ಒ) ಹಾಗೂ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯಗಳ (ಡಿ.ಎಫ್‌.ಆರ್.ಎಲ್) ಸಂಯುಕ್ತಾಶ್ರಯದಲ್ಲಿ ಮೈಸೂರಿನಲ್ಲಿ ಆಯೋಜಿಸಿರುವ ವಸ್ತು ಪ್ರದರ್ಶನಕ್ಕೆ ನಗರ ಪೊಲೀಸ್ ಆಯುಕ್ತ  ಡಾ ಚಂದ್ರಗುಪ್ತ ಚಾಲನೆ ನೀಡಿದರು.

ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಬಲರಾಮ ದ್ವಾರದ ಬಳಿ ವಸ್ತು ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಇಂದಿನಿಂದ ಎರಡು ದಿನಗಳ ಕಾಲ  ನಡೆಯಲಿದೆ. ಡಿ ಎಫ್ ಆರ್ ಎಲ್ ನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳು ವಸ್ತು ಪ್ರದರ್ಶನದಲ್ಲಿ ಅನಾವರಣಗೊಳ್ಳುತ್ತಿವೆ.

ರಕ್ಷಣಾ ಸಂದರ್ಭದ ಆಹಾರಗಳು, ರಕ್ಷಣಾ ಪರಿಕರಗಳು, ವಾಣಿಜ್ಯೀಕರಣಕ್ಕೆ ಲಭ್ಯವಿರುವ ಉತ್ಪನ್ನಗಳು ಮತ್ತು ತಂತ್ರ ಜ್ಞಾನಗಳು, ಸೇವಿಸಲು ಸಿದ್ದವಿರುವ ಆಹಾರಗಳು, ದಿಢೀರ್ ಆಹಾರ, ಮಿಶ್ರಣಗಳು, ಪುನರ್ ರಚಿಸಲು ಸಿದ್ದವಾಗಿರುವ ಸೂಪ್, ಪಾನೀಯ ಜ್ಯೂಸ್ ಪೌಡರ್ ಮಿಶ್ರಣಗಳು, ಆಹಾರ ಸಂರಕ್ಷಕಗಳು, ಡಿಟೆಕ್ಶನ್ ಕಿಟ್, ವಿನ್ಯಾಸ ಮತ್ತು ಯಂತ್ರೋಪಕರಣಗಳು ಸೇರಿದಂತೆ ಇನ್ನಿತರ ವೈವಿಧ್ಯಗಳು ವಸ್ತು ಪ್ರದರ್ಶನದಲ್ಲಿ ಅನಾವರಣಗೊಂಡಿವೆ.

Key words: Material -exhibition – DRDO –DFRL-mysore