ಮುಂದಿನ ದಿನಗಳಲ್ಲಿ ಮಸೂದ್, ಫಾಜಿಲ್ ಮನೆಗೂ ಭೇಟಿ ನೀಡುವೆ- ಸಿಎಂ ಬಸವರಾಜ ಬೊಮ್ಮಾಯಿ.

ಬೆಂಗಳೂರು,ಆಗಸ್ಟ್,1,2022(www.justkannada.in):  ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಪರಿಹಾರ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಫಾಜಿಲ್ ಮತ್ತು ಮಸೂದ್ ನಿವಾಸಕ್ಕೆ ಭೇಟಿ ನೀಡಿ ಪರಿಹಾರ ಕೊಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮುಂದಿನ ದಿನಗಳಲ್ಲಿ ಫಾಜಿಲ್ ಹಾಗೂ ಮಸೂದ್​ ಮನೆಗೂ ಭೇಟಿ ನೀಡುತ್ತೇನೆ. ಸರಣಿ ಹತ್ಯೆಗಳ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಕೇರಳ ಗಡಿ ಭಾಗದಲ್ಲಿ ಟೈಟ್​ ಸೆಕ್ಯೂರಿಟಿಗೆ ಸೂಚಿಸಲಾಗಿದೆ. ಆದಷ್ಟು ಶೀಘ್ರ ಆರೋಪಿಗಳನ್ನ ಬಂಧಿಸಲಾಗುತ್ತೆ ಎಂದು ತಿಳಿಸಿದರು.

ಪ್ರವೀಣ್ ನೆಟ್ಡಾರು ಹತ್ಯೆ ಪ್ರಕರಣದ ವಿಚಾರವಾಗಿ ಮಾತನಾಡಿ, ಪ್ರವೀಣ್ ಹತ್ಯೆ ಪ್ರಕರಣ ತನಿಖೆ ನಡೆಯುತ್ತಿದೆ. ಆದಷ್ಟು ಬೇಗ ಕೊಲೆಗಡುಕರ ಬಂಧನವಾಗುತ್ತದೆ.  ಎನ್ಐಎಗೆ ಅನೌಪಸಚಾರಿಕವಾಗಿ ತಿಳಿಸಿದ್ದೇವೆ. ಎರಡು ಮೂರು ದಿನಗಳಲ್ಲಿ ಪ್ರಕರಣ ಎನ್ ಐಗೆ ವಹಿಸುತ್ತೇವೆ. ತಾಂತ್ರಿಕ ಮತ್ತು ಪೇಪರ್ ವರ್ಕ್ ನಡೀತಿದೆ. ಆದಷ್ಟು ಬೇಗ ಪ್ರಕರಣ ವರ್ಗಾವಣೆ ಮಾಡುತ್ತೇವೆ. ಕೆಲವು ಎನ್‌ಐಎ ಅಧಿಕಾರಿಗಳು ಕೇರಳ ಮತ್ತು ಮಂಗಳೂರಿನಲ್ಲಿ ಈಗಾಗಲೇ ಮಾಹಿತಿ ಪಡೆಯುತ್ತಿದ್ದಾರೆ ಎಂದರು.

Key words: masud-Pazil-murder-case-CM-Basavaraj bommai