ಸಿಎಂ ಒಪ್ಪಿದ್ರೆ ಮಾಸ್ಕ್ ಕಡ್ಡಾಯ ನಿಯಮ ಸಡಿಲ- ಆರೋಗ್ಯ ಸಚಿವ ಡಾ.ಕೆ.ಸುಧಾಕರ್.

Promotion

ಬೆಂಗಳೂರು,ಏಪ್ರಿಲ್,4,2022(www.justkannada.in):  ಸಿಎಂ ಒಪ್ಪಿದರೇ ಮಾಸ್ಕ್ ಕಡ್ಡಾಯ ನಿಯಮ ಸಡಿಲಗೊಳಿಸುತ್ತೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ನಿಯಮ ಸಡಿಲ ಬಗ್ಗೆ ಸಿಎಂ ಮತ್ತು ತಜ್ಞರ ಜತೆ ಚರ್ಚಿಸುತ್ತೇವೆ.   90 %  ಜನ ಮಾಸ್ಕ್ ಇಲ್ಲದೇ ಓಡಾಡುತ್ತಿದ್ದಾರೆ. ಸಿಎಂ ಒಪ್ಪಿದರೇ ಮಾಸ್ಕ್ ಕಡ್ಡಾಯ ನಿಯಮ ಸಡಿಲಗೊಳಿಸುತ್ತೇವೆ. ಕೊರೋನಾ ಹೆಚ್ಚಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದರು.    

ಒಮಿಕ್ರಾನ್ ಹೊಸ ತಳಿ ಪತ್ತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಚೀನಾ ಸೇರಿ ಅನೇಕ ದೇಶಗಳಲ್ಲಿ ಹೊಸ ತಳಿ ಪತ್ತೆಯಾಗಿದೆ. ಆದರೆ ಇದು ಹೆಚ್ಚು ಪರಿಣಾಮ ಬೀರಲ್ಲ.  ಈ ಬಗ್ಗೆ ಮುನ್ನೆಚ್ಚರಿಗೆ ಕ್ರಮಕೈಗೊಂಡಿದ್ದೇವೆ. ಹೊಸ ತಳಿ ಪತ್ತೆಯಾದರೇ ಐಸಿಎಂಆರ್ ಗೆ ತಿಳಿಸುತ್ತೇವೆ ಎಂದರು.

Key words: mask- Mandatory Rule-minister –Sudhakar