ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ…

Promotion

ಮೈಸೂರು,ಜೂ,23,2020(www.justkannada.in): ಜೂನ್ 25 ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ಕೊರೋನಾ ಸಂಕಷ್ಟದ ನಡುವೆ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿಕೊಂಡಿದೆ. ಕೊರೋನಾ ನಿಯಂತ್ರಣಕ್ಕೆ ಮಾಸ್ಕ್ ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ.

ಹೀಗಾಗಿ ಮೈಸೂರಿನಲ್ಲಿ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ  ಶ್ರೀರಾಮಕೃಷ್ಣ ಆಶ್ರಮದ ವತಿಯಿಂದ  ಮಾಸ್ಕ್ ವಿತರಣೆ ಮಾಡಲಾಯಿತು. ಸ್ವಾಮೀಜಿ ಶಾಂತಿವ್ರಾತಾನಂದ ಮಹಾರಾಜ್  ಮಾಸ್ಕ್ ವಿತರಿಸಿದರು. ಮೈಸೂರಿನ ಒಂಟಿಕೊಪ್ಪಲ್ ನ ಸರ್ಕಾರಿ ಪ್ರೌಢಾ ಶಾಲೆಯಲ್ಲಿ ಮಾಸ್ಕ್ ವಿತರಣಾ  ಕಾರ್ಯಕ್ರಮ ನಡೆಯಿತು. ಇನ್ನು ಕೊರೊನಾ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಪಾಲಿಸುವಂತೆ ಸ್ವಾಮಿಜೀಗಳು  ಮಾರ್ಗದರ್ಶನ ಮಾಡಿದರು.Mask- Distribution - SSLC -Students - Sri Ramakrishna Ashram-mysore

ಇದೇ 25 ರಂದು ಕೊರೊನಾ ನಡುವೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳು ಕೊರೋನಾ ಕ್ರಮಗಳನ್ನ ಪಾಲಿಸುತ್ತಾ ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಸ್ವಾಮೀಜಿ ಶಾಂತಿವ್ರಾತಾನಂದ ಮಹಾರಾಜ್ ಧೈರ್ಯ ತುಂಬಿದರು.

Key words: Mask- Distribution – SSLC -Students – Sri Ramakrishna Ashram-mysore