ನಾಡಿದ್ದು (ಆ.23) ಮನೋರಂಜನ್‌ ರವಿಚಂದ್ರನ್‌ ‘ಪ್ರಾರಂಭ’ ಟೀಸರ್ ಬಿಡುಗಡೆ

Promotion

ಬೆಂಗಳೂರು, ಆಗಸ್ಟ್ 21, 2019 (www.justkannada.in): ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌ ಅಭಿನಯದ ಹೊಸಚಿತ್ರದ ಟೀಸರ್ ನಾಡಿದ್ದು (ಆ.23)ರಂದು ಬಿಡುಗಡೆಯಾಗಲಿದೆ.

‘ಪ್ರಾರಂಭ’ದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಟೀಸರ್ ಗೆ ದರ್ಶನ್ ವಾಯ್ಸ್ ಓವರ್ ನೀಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ಹಾಗೂ ಮಧ್ಯದಲ್ಲಿ ಹಲವು ಭಾರಿ ದರ್ಶನ್ ವಾಯ್ಸ್ ಕೇಳಿ ಬರುತ್ತದೆ, ಸಿನಮಾ ಟೀಸರ್ ಆಗಸ್ಟ್ 23ರಂದು ರಿಲೀಸ್ ಆಗಲಿದೆ.

ಬೃಹಸ್ಪತಿ ಮತ್ತು ಸಾಹೇಬ ಚಿತ್ರಗಳ ಬಳಿಕ ‘ಪ್ರಾರಂಭ’ ಮನೋರಂಜನ್‌ ಮೂರನೇ ಸಿನಿಮಾವಾಗಿದೆ, ಇದರಲ್ಲಿ ಮನೋರಂಜನ್ ಈ ಸಿನಿಮಾದಲ್ಲಿ 2 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೀರ್ತಿ ಕಲ್ಕೇರಿ ಮನೋರಂಜನ್ ಗೆ ನಾಯಕಿಯಾಗಿದ್ದಾರೆ,. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆಡಿಯೋ ಲಾಂಚ್ ಗಾಗಿ ಸಿನಿಮಾ ತಂಡ ಪ್ಲಾನ್ ಮಾಡುತ್ತಿದೆ.