ನಾನು ಭರವಸೆ ನೀಡುತ್ತೇನೆ, ಎಲ್ಲಾ ಮೂರು ಪ್ರಕರಣಗಳಲ್ಲೂ ಭೇದಿಸುತ್ತೇವೆ-ಡಿಜಿ, ಐಜಿಪಿ ಪ್ರವೀಣ್ ಸೂದ್.

Promotion

ಮಂಗಳೂರು,ಆಗಸ್ಟ್,1,2022(www.justkannada.in):  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು, ಮಸೂದ್, ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ನಾನು ಭರವಸೆ ನೀಡುತ್ತೇನೆ, ಎಲ್ಲಾ ಮೂರು ಪ್ರಕರಣಗಳಲ್ಲೂ ಭೇದಿಸುತ್ತೇವೆ ಎಂದು ಹೇಳಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಡಿಜಿ,ಐಜಿಪಿ ಪ್ರವೀಣ್ ಸೂದ್, ಮುಂದೆ ಇಂತಹ ಘಟನಗಳು ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲಾ ಮೂರು ಪ್ರಕರಣಗಳನ್ನೂ ಭೇದಿಸುತ್ತೇವೆ. ಪ್ರತಿಯೊಂದು ಪ್ರಕರಣವೂ ನಮಗೆ ಮುಖ್ಯ.   ನಾನು ಭರವಸೆ ನೀಡುತ್ತೇನೆ ಎಲ್ಲಾ ಕೇಸ್ ಗಳನ್ನೂ ಭೇದಿಸುತ್ತೇವೆ. ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆಗಳಲ್ಲಿ ಭಾಗಿಯಾದ ಆರೋಪಿಗಳು ಯಾವುದೇ ಸಂಘಟನೆಯವರಾಗಿರಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ವ್ಯಕ್ತಿ, ಸಂಘಟನೆ, ಸಿದ್ದಾಂತದವರು ಈ ಕೃತ್ಯಗಳ ಹಿಂದಿದ್ದರೂ ಬಿಡುವುದಿಲ್ಲ ಎಂದು ಡಿಜಿಪಿ ಪ್ರವೀಣ್ ಸೂದ್ ತಿಳಿಸಿದರು.

Key words: mangalore- we -will –all- three cases – DG, IGP- Praveen Sood