ಸುಳ್ಯದಲ್ಲಿ ಸಿಂಧೂರಿ : ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳಿಗೆ ವರುಣನ ಅಡ್ಡಿ..!

 

ಸುಳ್ಯ, ಜು14, 2021 : (www.justkannada.in news) : ತಾಲೂಕಿನ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ ವನ ಸಂವರ್ಧನಾ ಕಾರ್ಯಕ್ರಮ’ ಆಯೋಜಿಸಲಾಗಿತ್ತು.
ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ ಏಕ ಕಾಲದಲ್ಲಿ 14 ಕೇಂದ್ರಗಳಲ್ಲಿ ಸಸಿನೆಡುವ ಮೂಲಕ ‘ ವನ ಸಂವರ್ಧನಾ ಕಾರ್ಯಕ್ರಮ’ಕ್ಕೆ ಮಂಗಳವಾರ ಚಾಲನೆ ನೀಡಿದರು.

ಮುಗಿಬಿದ್ದ ಅಭಿಮಾನಿಗಳು :

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾದ ರೋಹಿಣಿ ಸಿಂಧೂರಿ ಅವರನ್ನು ನೋಡಲು ಸುಳ್ಯದಲ್ಲಿ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ‘ ವನ ಸಂವರ್ಧನಾ ಕಾರ್ಯಕ್ರಮ’ ಮುಗಿಸಿಕೊಂಡು ಪೊಳಲಿಗೆ ತೆರಳುವ ಸಂದರ್ಭದಲ್ಲಿ ಅಭಿಮಾನಿಗಳು ರೋಹಿಣಿ ಅವರ ಜತೆಗೆ ಸೆಲ್ಫಿಗೆ ಎದುರು ನೋಡುತ್ತಿದ್ದರು.

ಆದರೆ ಕಾರಿನಿಂದ ಇಳಿಯಲಾಗಷ್ಟು ಜೋರಾಗಿ ಮಳೆ ಬೀಳುತ್ತಿದ್ದ ಕಾರಣ, ರೋಹಿಣಿ ಸಿಂಧೂರಿ ಕಾರಲ್ಲಿ ಕುಳಿತುಕೊಂಡೇ ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿದರು. ಇದರಿಂದ ಸೆಲ್ಫಿಗಾಗಿ ಕಾದಿದ್ದ ಅಭಿಮಾನಿಗಳು ನಿರಾಶಾರಾದರು.
ಬಳಿಕ ಕುಕ್ಕೆ ಸುಬ್ರಮಣ್ಯದಿಂದ ಪೊಳಲಿಗೆ ತೆರಳಿದರು. ಅಲ್ಲೂ ಸಹ ಆಯುಕ್ತೆ ರೋಹಿಣಿಯವರ ಆಗಮನದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳು ಸಿಂಧೂರಿ ಅವರನ್ನು ಸುತ್ತುವರಿದು ಆತ್ಮೀಯವಾಗಿ ಸ್ವಾಗತಿಸಿದರು.

 

key words : mangalore-sullia-kukke subramanya-temple-rohini-sindhoori-fans-selfie