ದೇಶವಿಡಿ ತನ್ನ ಬಗ್ಗೆ ಮಾತನಾಡಬೇಕೆಂಬ ಮಹದಾಸೆ ಇಟ್ಟಿಕೊಂಡಿದ್ದನಂತೆ ಆರೋಪಿ ಆದಿತ್ಯ ರಾವ್…

kannada t-shirts

ಬೆಂಗಳೂರು,ಜ,22,2020(www.justkannada.in):  ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟು ನಂತರ ಪೊಲೀಸರ ಎದುರು ಶರಣಾಗಿರುವ ಆರೋಪಿ ಆದಿತ್ಯರಾವ್, ತಾನು ಹೆಸರು ಮಾಡಬೇಕು ದೇಶವಿಡಿ ತನ್ನ ಬಗ್ಗೆ ಮಾತನಾಡಬೇಕೆಂಬ ಮಹದಾಸೆ ಇಟ್ಟಿಕೊಂಡಿದ್ದನಂತೆ.

ಹೌದು,  ಜನ ತನ್ನನ್ನ  ಗುರುತಿಸಬವೇಕು. ದೇಶವಿಡಿ ತನ್ನ ಬಗ್ಗೆ ಮಾತನಾಡಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದ     ಪ್ರತಿಮನೆಯಲ್ಲಿ ತನ್ನ ಬಗ್ಗೆ ಚರ್ಚೆಯಾಗಬೇಕು ಎಂದು ಆದಿತ್ಯರಾವ್ ಆಸೆ ಇಟ್ಟುಕೊಂಡಿದ್ದನಂತೆ. ಈ ನಡುವೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೆಲಸ ಪಡೆಯಲು ಯತ್ನಿಸಿದ್ದ ಆರೋಪಿ ಆದಿತ್ಯರಾವ್ ಕೆಲಸ ಸಿಗದ ಹಿನ್ನೆಲೆ ನಿರಾಸೆಗೊಂಡು ಎರಡು ಬಾರಿ ಬಾಂಬ್ ಬೆದರಿಕೆ ಕರೆ ಮಾಡಿದ್ದ. ನಂತರ ಅರೆಸ್ಟ್ ಆಗಿ ಜೈಲು ಸೇರಿದ್ದನು.

ಜೈಲಿನಲ್ಲಿದ್ದ ಆದಿತ್ಯರಾವ್ ತಾನು ಬಿಇ ಎಂಬಿಎ ಓದಿದ್ರೂ ಕೆಲಸ ದೊರೆತಿಲ್ಲ ಎಂದು ಸಹ ಕೈದಿ ಬಳಿ ಹೇಳಿಕೊಂಡಿದ್ದನಂತೆ. ಈತ ಜೈಲಿನಲ್ಲಿರುವಾಗಲೇ  ತಾಯಿ ತೀರಿಕೊಂಡಿದ್ದು ತನ್ನ ತಾಯಿಯ ಅಂತ್ಯಸಂಸ್ಕಾರಕ್ಕೂ ಕೂಡ  ಹೋಗಿರಲಿಲ್ಲ. ಎನ್ನಲಾಗಿದೆ.

ಇನ್ನು ತನ್ನ ಅಣ್ಣ ಆದಿತ್ಯ ರಾವ್ ಕೃತ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಸಹೋದರ ಅಕ್ಷತ್ ರಾವ್,  ಅದಿತ್ಯನಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಆತನ ತಪ್ಪುಗಳಿಗೆ ನಾವು ಜವಾಬ್ದಾರರಲ್ಲ. ಆತ ಎರಡು ವರ್ಷದಿಂದ ನಮ್ಮ ಸಂಪರ್ಕದಲ್ಲಿರಲಿಲ್ಲ. ಆತನನ್ನ ಸರಿಮಾಡಲು ನಮ್ಮ ತಂದೆ ಯತ್ನಿಸಿದ್ರು.  ಎಷ್ಟೇ ಪ್ರಯತ್ನಿಸಿದ್ರು ಆತ ಸರಿಯಗಲಿಲ್ಲ.   ಬೆದರಿಕೆ ಕರೆ ಹಾಕಿದ್ದಾಗ ಬುದ್ದಿ ಹೇಳಿದ್ದವು. ಆತನ  ಕೃತ್ಯಕ್ಕೆ ಜವಾಬ್ದಾರರಾಗಲು ಸಾಧ್ಯವಿಲ್ಲ.  ನಾವು ಅವನಿಗೆ ಯಾವುದೇ  ಜಾಮೀನಿಗೂ ಸಹಾಯ ಮಾಡಿರಲಿಲ್ಲ ಅವನ ಕಂಡರೇ ಭಯ ಇದೆ. ತಾಯಿ ತೀರಿಕೊಂಡಾಗ ವಿಷಯ ಹೇಳಲು ಕರೆ ಮಾಡಿದ್ದವು. ನಮ್ಮ ಮನೆಗೆ ಆತ ಬರುವುದು ಬೇಡ ಎಂದು ತಂದೆ ಹೇಳಿದ್ದಾರೆ ಎಂದು ತಿಳಿಸಿದರು.

Key words: mangalore airport-bomb-accused-aditya rao- police

website developers in mysore