ಕೆ.ಆರ್ ಎಸ್ ಭರ್ತಿಗೆ ಇನ್ನೆರಡೇ ಅಡಿ ಬಾಕಿ….

Promotion

ಮಂಡ್ಯ,ಅ,11,2020(www.justkannada.in): ರಾಜ್ಯದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು ಈ ನಡುವೆ ಜಲಾಶಯಗಳೂ ಭರ್ತಿಯಾಗಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಈ ಮಧ್ಯೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿರುವ ಕೆ.ಆರ್ ಎಸ್ ಡ್ಯಾಂಗೂ ನೀರು ಹರಿದು ಬಂದಿದ್ದು ಡ್ಯಾಂ ಭರ್ತಿಗೆ ಇನ್ನರಡೆ ಅಡಿ ಮಾತ್ರ ಬಾಕಿ ಇದೆ.jk-logo-justkannada-logo

ಕೆ.ಆರ್ ಎಸ್ 124.80 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು ಪ್ರಸ್ತುತ ನೀರಿನ ಮಟ್ಟ  122 ಅಡಿ ಇದೆ.  ಕೆ.ಆರ್ ಎಸ್ ಜಲಾಶಯಕ್ಕೆ 32,967 ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು ಜಲಾಶಯದಿಂದ ಪ್ರಸ್ತುತ 2159 ಕ್ಯೂಸೆಕ್ ನೀರು ನದಿಗೆ  ಬಿಡಲಾಗುತ್ತಿದೆ. 1458 ಕ್ಯೂಸೆಕ್ ನೀರನ್ನ ನಾಲೆಗೆ ರಿಲೀಸ್ ಮಾಡಲಾಗಿದೆ.mandya-rain-krs-filling-only-two-feet

ಜಲಾಶಯದಲ್ಲಿ ಪ್ರಸ್ತುತ 45.6 ಟಿಎಂಸಿ ನೀರು ಸಂಗ್ರಹವಾಗಿದ್ದು, ಕೆಆರ್ಎಸ್ ಭರ್ತಿ ಹಿನ್ನೆಲೆಯಲ್ಲಿ ರೈತರ ಮೊಗದಲ್ಲಿ ಸಂತಸ ಮೂಡಿದೆ. ಕಳೆದ ಐದಾರು ದಿನಗಳಿಂದ ವರುಣನ ಅಬ್ಬರದಿಂದಾಗಿ ಕೊಡಗು, ಉಡುಪಿ, ಚಿಕ್ಕಮಗಳೂರು, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ ಸೇರಿ ಹಲವು ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

Key words: mandya- rain-KRS –filling- only- two –feet