ಮಂಡ್ಯ ಜಿಲ್ಲೆಯಲ್ಲಿ ಭಾವನಾತ್ಮಕವಾಗಿ  ಮತ ಸೆಳೆಯಲು ಸಾಧ್ಯವಿಲ್ಲ- ಸಿ.ಪಿ ಯೋಗೇಶ್ವರ್

Promotion

ಬೆಂಗಳೂರು,ನವೆಂಬರ್,28,2022(www.justkannada.in): ಮಂಡ್ಯ ಜಿಲ್ಲೆಯಲ್ಲಿ ಭಾವನಾತ್ಮಕವಾಗಿ  ಮತ ಸೆಳೆಯಲು ಸಾಧ್ಯವಿಲ್ಲ. ಕೆಲಸದ ಮೂಲಕ ಅಸ್ತಿತ್ವ ತೋರಿಸಿದರೇ ಹೆಚ್ಚು ಸ್ಥಾನ ಗೆಲ್ಲಬಹುದು ಎಂದು ಸರ್ಕಾರದ ವಿರುದ್ಧ  ವಿಧಾನಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ಸಿ.ಪಿ ಯೋಗೇಶ್ವರ್, ಮಂಡ್ಯ ಭಾಗದಲ್ಲಿ ಅಭ್ಯರ್ಥಿಗಳ ಕೊರತೆ ಇತ್ತು. ಮಂಡ್ಯದಲ್ಲಿ ಭಾವನಾತ್ಮಕವಾಗಿ ಗೆಲ್ಲುವುದಕ್ಕೆ  ಆಗಲ್ಲ.  ಅಭಿವೃದ್ಧಿ ಮೂಲಕ ಗೆಲ್ಲಬೇಕು. ಬಿಜೆಪಿ ಸರ್ಕಾರವಿದ್ದರೂ  ವಿರೋಧ ಪಕ್ಷಕ್ಕೆ ಅನುಕೂಲವಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಸರ್ಕಾರ ಕೆಲಸ ಮಾಡಬೇಕು.

ನಮ್ಮ ಸರ್ಕಾರದಲ್ಲಿ ವಿಪಕ್ಷಗಳಿಗೆ ಬಹಳ ಅನುಕೂಲ ಆಗುತ್ತದೆ. ಅನಿವಾರ್ಯವಾಗಿ ಈ ವಿಚಾರವನ್ನ ಬಹಿರಂಗವಾಗಿ ಹೇಳುತ್ತಿದ್ದೇನೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದರು.

Key words:  Mandya district – not possible – votes –emotionally-MLC –Yogeshwar