ಮಾನಸ ಗಂಗೋತ್ರಿ ಮೈಸೂರಿನ ಶ್ವಾಸಕೇಂದ್ರ: ಪ್ರೊ.ಜಿ.ಹೇಮಂತ್ ಕುಮಾರ್

ಮೈಸೂರು, ಜೂನ್ 05, 2020 (www.justkannada.in): ಮೈಸೂರು ನಗರದ ಶ್ವಾಸಕೇಂದ್ರ ಆಗಿರುವ ಮಾನಸ ಗಂಗೋತ್ರಿ ಕ್ಯಾಂಪಸ್ ಸ್ವಚ್ಛಂದ ಹಸಿರು ಪರಿಸರವನ್ನು ಮುಂದೆಯೂ ಇದೇ ರೀತಿ ಸಂರಕ್ಷಣೆ ಮಾಡಿಕೊಂಡು ಹೋಗಬೇಕೆಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಸಲಹೆ ನೀಡಿದರು.

ಮೈಸೂರಿನ ಮಾನಸ ಗಂಗೋತ್ರಿಯ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ ಮೆಂಟ್ ಸ್ಟಡಿ ವಿಭಾಗ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಗರ ಕೇಂದ್ರದ ನಡುವೆ ನೂರಾರು ಎಕರೆ ಜಾಗದಲ್ಲಿ ಮಾನಸ ಗಂಗೋತ್ರಿ ವ್ಯಾಪಿಸಿದೆ. ಇಲ್ಲಿರುವ ಮರ, ಗಿಡಗಳಿಂದ ಕೂಡಿದ ಹಸಿರಿನ ವಾತಾವರಣದಿಂದಲೇ ಮೈಸೂರಿನ ಜನತೆ ಉತ್ತಮ ಗಾಳಿ ಸೇವಿಸಲು ಸಾಧ್ಯವಾಗುತ್ತಿದೆ. ಹಿಂದೆ ವಿಶ್ವವಿದ್ಯಾನಿಲಯದಿಂದ ಹಾಕಿಸಲಾದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು ವಿವಿ ಆವರಣದಲ್ಲಿ ತಂಪನ್ನು ಸೂಸುತ್ತಿವೆ. ಕ್ಯಾಂಪಸ್ ನಲ್ಲಿರುವ ಈ ವಾತಾವರಣವನ್ನು ಇದೇ ರೀತಿ ಕಾಪಾಡಿಕೊಂಡು ಹೋಗಬೇಕೆಂದು ತಿಳಿಸಿದರು.

ಪರಿಸರ ದಿನಾಚರಣೆ ದಿನದಂದು ಪರಿಸರ ಸಂರಕ್ಷಣೆ, ಭೂಮಿ ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಎಲ್ಲರೂ ಆಲೋಚಿಸಬೇಕಿದೆ. ಹಿಂದೆ ಮನುಷ್ಯ ಮಾಡಿದ ಪರಿಸರ ವಿರೋಧಿ ಚಟುವಟಿಕೆಗಳಿಂದ ನಾನಾ ರೀತಿಯ ಅಪಾಯಗಳನ್ನು ಈಗ ಅನುಭವಿಸುತ್ತಿದ್ದೇವೆ. ಹೀಗಾಗಿ ಹಿಂದೆ ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಬೇಕೆಂದು ಸಲಹೆ ನೀಡಿದರು.

ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡಿ ನಿರ್ದೇಶಕ ಡಿ.ಎಂ. ಮಹೇಶ್, ಪ್ರಾಧ್ಯಾಪಕರಾದ ಮಂಗಳ, ಚೇತನ್, ಮೀರಾ ಹಾಗೂ ಇತರರು ಇದ್ದರು.

ENGLISH SUMMARY…Manasa Gangotri major lung space of Mysuru: Prof. G. Hemanth Kumar
Mysuru, June 5, 2022 (www.justkannada.in): Prof. G. Hemanth Kumar, Vice-Chancellor, University of Mysore observed that the Manasa Gangotri is one of the major lung spaces of Mysuru city and wished it will be maintained in the same way in the future also.
He inaugurated the ‘World Environment Day celebrations organized by the Institute of Development Studies, University of Mysore, by planting a sapling on the Manasa Gangotri campus.
“The Manasa Gantori, which is full of greenery is located in the center of the city. It has been a major lung space for the people of the city. The people of the city can get good quality air because of this. The saplings which were planted several years ago have grown and are providing air and shelter today. This environment and greenery should be maintained in the same way in the future also,” he said.
“Everyone should think about how to protect the environment and save planet earth. We are suffering today because of several anti-environmental activities done by people earlier. Hence, we all should think about not repeating those mistakes and protecting the environment for future generations,” he added.
Institute of Development Studies Director D.M. Mahesh, Professors Mangala, Chetan, Meera, and others were present.
Keywords: University of Mysore/ Environment Day/ lung space/ Manasa Gangotri