ಬೆಂಗಳೂರಿನಲ್ಲಿ ಫ್ಲೈಓವರ್ ಮೇಲಿಂದ ಹಣದ ನೋಟುಗಳನ್ನೆಸೆದ ವ್ಯಕ್ತಿ : ವಿಡಿಯೋ ವೈರಲ್.

Promotion

ಬೆಂಗಳೂರು,ಜನವರಿ,24,2023(www.justkannada.in):  ಬೆಂಗಳೂರಿನ ಕೆ.ಆರ್​.ಮಾರ್ಕೆಟ್​​ ನ ಫ್ಲೈಓವರ್​ ಮೇಲಿಂದ  ವ್ಯಕ್ತಿಯೋರ್ವ 10 ರೂ. ಮುಖಬೆಲೆಯ ನೋಟುಗಳನ್ನ  ಎಸೆದಿದ್ದಾರೆ.

ಅರುಣ್ ಎಂಬಾತ ವ್ಯಕ್ತಿ ಆಯಕ್ಟಿವ್ ಹೋಂಡಾದಲ್ಲಿ ಬಂದು ಫ್ಲೈ ಓವರ್ ಮೇಲಿಂದ ಹಣ ಎಸೆದಿದ್ದು ಹತ್ತು ರೂಪಾಯಿ ನೋಟು ಚೆಲ್ಲಿ ಹೋಗಿದ್ದಾರೆ. ಮೇಲಿಂದ ಹಣ ಬೀಳುತ್ತಿದ್ದಂತೆ ಕೆಲವರು ಅದನ್ನು ಎತ್ತಿಕೊಳ್ಳಲು ಮುಗಿಬಿದಿದ್ದಾರೆ. ಸದ್ಯ ಫ್ಲೈಓವರ್​ ಮೇಲಿಂದ ಹಣದ ಮಳೆಯಾಗುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅರುಣ್ ಜೀವನದಲ್ಲಿ ಜಿಗುಪ್ಸೆ ಬಂದಿದೆ  ಎಂದು ಹೇಳಿದ್ದಾರಂತೆ. ನೋಟು ಎಸೆದ ವ್ಯಕ್ತಿ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಯಾವ ಉದ್ದೇಶಕ್ಕೆ ಹಣ ಎಸೆದ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಅರುಣ್ ಬೆಂಗಳೂರಲ್ಲಿ ಇವೆಂಟ್​ ಮ್ಯಾನೇಜ್​ಮೆಂಟ್ ನಡೆಸುತ್ತಿದ್ದು, , ಇವೆಂಟ್ ಮ್ಯಾನೇಜ್​ ಮೆಂಟ್​ ಜೊತೆ ಆ್ಯಂಕರಿಂಗ್ ಕೂಡ ಮಾಡುತ್ತಿದ್ದರು. ನಾಗರಬಾವಿಯಲ್ಲಿದ್ದು ಯೂಟ್ಯೂಬ್​ ಚಾನಲ್ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: Man-throws -money -notes – flyover – Bengaluru