ಮೈಸೂರಿನಲ್ಲಿ ಆಟೋ ಚಾಲಕನಿಗೆ ಚಾಕು ಇರಿತ.

stabbing-knife-girlfriend-mysore
Promotion

ಮೈಸೂರು,ಡಿಸೆಂಬರ್,8,2021(www.justkannada.in):  ದುಷ್ಕರ್ಮಿಗಳು ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನಿಗೆ ಚಾಕು ಇರಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತೌಸಿಫ್‌ಬಿನ್ ಫೀರ್ ಪಾಷ (35) ಗಾಯಗೊಂಡ ಆಟೋ ಚಾಲಕ. ಮೈಸೂರಿನ ಹಲೀಂ ನಗರದ ನಿವಾಸಿಯಾಗಿರುವ ತೌಸಿಫ್‌ಬಿನ್ ಫೀರ್ ಪಾಷಗೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದು, ಗಾಯಗೊಂಡ ತೌಸಿಫ್‌ ಬಿನ್ ಫೀರ್ ಪಾಷರನ್ನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.stabbing-knife-girlfriend-mysore

ಈ ಕುರಿತು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Man- stabbed- knife -Mysore.