ಮೈಸೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Promotion

ಮೈಸೂರು, ನವೆಂಬರ್ 29, 2020 (www.justkannada.in): ಎಚ್.ಡಿ.ಕೋಟೆ ತಾಲೂಕಿನ ನೆಮ್ಮನಹಳ್ಳಿಯಲ್ಲಿ ಕಾಡನೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ.

ನೆಮ್ಮನಹಳ್ಳಿ ಗ್ರಾಮದ ಯೋಗೇಶ್ ಮೃತ ದುರ್ದೈವಿ. ಬೆಳಗ್ಗೆ ಶುಂಠಿ ಜಮೀನಿಗೆ ತೆರಳಿದ್ದಾಗ ದಾಳಿನಡೆಸಿದ ಕಾಡಾನೆ. ಬಂಡೀಪುರ ಅರಣ್ಯ ವ್ಯಾಪ್ತಿಯ ಮೊಳೆಯೂರ ವಲಯದಲ್ಲಿ ಘಟನೆ ನಡೆದಿದೆ.

ಸ್ಥಳಕ್ಕೆ ಅರಣ್ಯಾಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರ ಸಹಾಯದಿಂದ ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ನಡೆಸಲಾಗುತ್ತಿದೆ.