ಬ್ರಾಹ್ಮಣರನ್ನ ಮುಖ್ಯಮಂತ್ರಿ ಮಾಡಿ: ಮೈಸೂರು ಜಿಲ್ಲಾ ಭ್ರಾಹ್ಮಣ ಸಂಘ ಆಗ್ರಹ

Promotion

ಮೈಸೂರು, ಜುಲೈ 24, 2021 (www.justkannada.in): ಬ್ರಾಹ್ಮಣರನ್ನ ಈ ಬಾರಿ ಮುಖ್ಯಮಂತ್ರಿ ಮಾಡಿ ಎಂದು ಮೈಸೂರು ಜಿಲ್ಲಾ ಭ್ರಾಹ್ಮಣ ಸಂಘದಿಂದ ಒತ್ತಾಯಿಸಿದೆ.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್, ಕಳೆದ ೩೦ ವರ್ಷಗಳಿಂದ ಬ್ರಾಹ್ಮಣ ಸಮುದಾಯದ ಯಾವೊಬ್ಬರೂ ಮುಖ್ಯಮಂತ್ರಿಯಾಗಿಲ್ಲ. ಹಾಗಾಗಿ ಈ ಬಾರಿ ಬ್ರಾಹ್ಮಣ ಸಮುದಾಯದವರನ್ನ ಮುಖ್ಯಮಂತ್ರಿ ಮಾಡಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಹಲವು ಮಂದಿ ಬ್ರಾಹ್ಮಣ ನಾಯಕರಿದ್ದಾರೆ. ಅದರಲ್ಲಿ ಯಾರಾದರೊಬ್ಬರನ್ನ ಮುಖ್ಯಮಂತ್ರಿ ಮಾಡಿ. ಹೆಸರು ಸೂಚಿಸದೆ ಬ್ರಾಹ್ಮಣರಿಗೆ ಚಾನ್ಸ್ ಕೊಡಿ ಎಂದು ಡಿ.ಟಿ ಪ್ರಕಾಶ್ ಆಗ್ರಹಿಸಿದ್ದಾರೆ.