ಪಕ್ಷದ್ರೋಹಿಗಳಿಗೆ ಕ್ಷಮೆ ಎನ್ನುವುದೇ ಇಲ್ಲ: ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲು ಉದ್ಧವ್ ಗೆ ಮುಕ್ತ ಅವಕಾಶ- ಸಂಜಯ್ ರಾವತ್

Promotion

ಮುಂಬೈ,ಜೂನ್,25,2022(www.justkannada.in): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು ಈ ಮಧ್ಯೆ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲು ಉದ‍್ಧವ್ ಠಾಕ್ರೆಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ತಿಳಿಸಿದ್ದಾರೆ.

ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಬಳಿಕ ಮಾತನಾಡಿದ ಸಂಜಯ್ ರಾವತ್, ಶಿವಸೇನಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ 6 ನಿರ್ಣಯ ಕೈಗೊಳ್ಳಲಾಗಿದೆ. ಶಿವಸೇನೆ ಹೊರತುಪಡಿಸಿ ಬಾಳ ಸಾಹೇಬ್ ಹೆಸರು ಯಾರು ಬಳಸಬಾರದು. ಶೀವಸೇನಾದಲ್ಲಿ ಮಾತ್ರ ಬಾಳಾ ಸಾಹೇಬ್ ವಿಚಾರಧಾರೆಗಳಿವೆ. ಬಾಳಾ ಸಾಹೇಬ್ ಹೆಸರಲ್ಲಿ ರಾಜಕೀಯ ಮಾಡಬೇಡಿ.

ಪಕ್ಷ ದ್ರೋಹಿಗಳಿಗೆ ಕ್ಷಮೆ ಎನ್ನುವುದೇ ಇಲ್ಲ.  ಹಿಂದುತ್ವ ವಿಚಾರದಲ್ಲಿ ಪಕ್ಷ ರಾಜಿಯಾಗುವುದಿಲ್ಲ. ಪಕ್ಷದಲ್ಲಿ ನಿರ್ಧಾರ ಕೈಗೊಳ್ಳಲು ಉದ್ಧವ್ ಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಸಂಜಯ್ ರಾವತ್ ತಿಳಿಸಿದರು.

Key words: maharastra-political- Uddhav Thackeray -decisions -Sanjay Rawat