ಮುಂಬೈನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ಮಹಾರಾಷ್ಟ್ರ ಸರಕಾರ ಗ್ರೀನ್ ಸಿಗ್ನಲ್

Promotion

ಬೆಂಗಳೂರು, ಏಪ್ರಿಲ್ 06, 2021 (www.justkannada.in):

ಐಪಿಎಲ್ ತಂಡಗಳಿಗೆ ರಾತ್ರಿ ಅಭ್ಯಾಸಕ್ಕೆ ಮಹಾರಾಷ್ಟ್ರ ಸರಕಾರ ಅನುಮತಿ ನೀಡಿದೆ.

ಜತೆಗೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಮಹಾರಾಷ್ಟ್ರ ಸರ್ಕಾರದಿಂದ ಸಂಪೂರ್ಣ ಅನುಮತಿ ಲಭಿಸಿದೆ.

ಈ ಮೂಲಕ ಮುಂಬೈಯಲ್ಲಿ ಟೂರ್ನಿ ಆಯೋಜನೆಗೆ ಇದ್ದ ಎಲ್ಲಾ ಅಡೆತಡೆಗಳನ್ನು ಸರ್ಕಾರ ಬಗೆಹರಿಸಿದೆ.

ಇನ್ನು ಕೋವಿಡ್ ಪ್ರಕರಣಗಳ ನಿಯಂತ್ರಣಕ್ಕೆ ಮುಂಬೈಯಲ್ಲಿ ಸೋಮವಾರ ರಾತ್ರಿಯಿಂದ ಕರ್ಫ್ಯೂ ಜಾರಿಗೊಳಿಸಲಾಗಿದೆ. ರಾತ್ರಿ 8 pmನಿಂದ ಬೆಳಗ್ಗೆ 7 am ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಇದು ಏಪ್ರಿಲ್ 30ರ ವರೆಗೆ ಈ ಕರ್ಫ್ಯೂ ಮುಂದುವರೆಯಲಿದೆ.